17 ತಿಂಗಳಿನಿಂದ ಕುಡಿಯಲು ನೀರಿಲ್ಲ : ಆಲೂರು ಜನರ ಗೋಳು ಕೇಳೋರಿಲ್ಲ

1 min read
kalaburagi

17 ತಿಂಗಳಿನಿಂದ ಕುಡಿಯಲು ನೀರಿಲ್ಲ : ಆಲೂರು ಜನರ ಗೋಳು ಕೇಳೋರಿಲ್ಲ kalaburagi

ಕಲಬುರಗಿ : ಜಿಲ್ಲೆಯ ಆಲೂರು ಗ್ರಾಮದಲ್ಲಿ 17 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ಬಸವಳಿದಿದ್ದಾರೆ.

ಗ್ರಾಮದಲ್ಲಿ ಆರು ಕೊಳವೆಬಾವಿಗಳಿದ್ದರೂ ನೀರು ಮಾತ್ರ ಬರುತ್ತಿಲ್ಲ. ಇದರಿಂದಾಗಿ ಶುದ್ಧ ನೀರಿನ ಘಟಕಕ್ಕೆ ಬೀಗ ಹಾಕಲಾಗಿದೆ.

ಗ್ರಾಮದಲ್ಲೇ ಗ್ರಾಮಪಂಚಾಯಿತಿ ಇದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕಡೆಸಿಕೊಳ್ಳುತ್ತಿಲ್ಲ.

kalaburagi

ಈ ಗ್ರಾಮದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ವಾಸವಿದ್ದು, ನೀರಿಗಾಗಿ ಪ್ರತಿದಿನ ಕಿಲೋಮೀಟರ್ ಗಟ್ಟಲೇ ನಡೆದುಕೊಂಡು ಹೋಗಿ ಬಾವಿಗಳಿಂದ ನೀರು ತರುತ್ತಿದ್ದಾರೆ.

ಅಂದಹಾಗೆ ಈ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಅನೇಕ ಬಾರಿ ಗ್ರಾಮ ಪಂಚಾಯಿತಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಆಗ ಪರಿಹಾರ ಹುಡುಕುವುದಾಗಿ ಭರವಸೆ ನೀಡುವ ಅಧಿಕಾರಿಗಳು ಮತ್ತೆ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd