Noise ColorFit Caliber Buzz : ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್ ಹೊಂದಿರುವ ಸ್ಮಾರ್ಟ್ ವಾಚ್…
ದೇಶೀಯ ಎಲೆಕ್ಟ್ರಾನಿಕ್ಸ್ ಕಂಪನಿ Noise True Sync Smartwatch (Noise ColorFit Caliber Buzz) ನ್ನ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ColoFit Caliber Buzz, ಬಜೆಟ್ ಸ್ನೇಹಿ ಸ್ಮಾರ್ಟ್ ವಾಚ್ ಆಗಿದೆ. 500 nits ಬ್ರೈಟ್ನೆಸ್ನೊಂದಿಗೆ 1.69-ಇಂಚಿನ TFT ಡಿಸ್ಪ್ಲೇಯನ್ನು ಹೊಂದಿದೆ. Noise Colorfit Caliber Buzz ಕಂಪನಿಯ ಅಧಿಕೃತ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ರೂ 1,499 ಬೆಲೆಯಲ್ಲಿ ಖರೀದಿಸಲು ಲಭ್ಯವಿದೆ. ಇದು ಜೆಟ್ ಬ್ಲಾಕ್, ಆಲಿವ್ ಗ್ರೀನ್, ಮಿಡ್ನೈಟ್ ಬ್ಲೂ ಮತ್ತು ರೋಸ್ ಪಿಂಕ್ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.
ನಾಯ್ಸ್ ಕಲರ್ಫಿಟ್ ಸ್ಮಾರ್ಟ್ವಾಚ್ ನ ವಿಶೇಷತೆಗಳು:
ನಾಯ್ಸ್ ಕಲರ್ಫಿಟ್ ಕ್ಯಾಲಿಬರ್ ಬಜ್ 1.69-ಇಂಚಿನ TFT ಡಿಸ್ಪ್ಲೇಯನ್ನು ಹೊಂದಿದೆ. ಇದು 240×280 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು 500 nits ಬ್ರೈಟ್ನೆಸ್ ಡಿಸ್ಪ್ಲೆ ನೀಡುತ್ತದೆ.
ಸ್ಮಾರ್ಟ್ ವಾಚ್ ಕಾಲ್ – ಫ್ರಮ್ ಡಯಲ್-ಪ್ಯಾಡ್ ವೈಶಿಷ್ಟ್ಯದೊಂದಿಗೆ ಬರುತ್ತಿದೆ. ಜೊತೆಗೆ ಏಳು ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ಕುತೂಹಲಕಾರಿಯಾಗಿ, ಈ ಸ್ಮಾರ್ಟ್ ವಾಚ್ ಹೃದಯ ಬಡಿತ ಮಾನಿಟರಿಂಗ್, ಚಟುವಟಿಕೆ ಮಟ್ಟದ ಟ್ರ್ಯಾಕಿಂಗ್, SPO2 ಮಾಪನ, ಸ್ಲೀಪ್ ಟ್ರ್ಯಾಕಿಂಗ್, ಒತ್ತಡ ಟ್ರ್ಯಾಕಿಂಗ್, ಉಸಿರಾಟದ ವ್ಯಾಯಾಮ, ಮಹಿಳೆಯರ ಸೈಕಲ್ ಟ್ರ್ಯಾಕಿಂಗ್ ಮುಂತಾದ ವಿವಿಧ ಹೆಲ್ತ ರಿಲೇಟೆಡ್ ಫೀಚರ್ಸಗಳನ್ನ ನೀಡುತ್ತದೆ.
ಇದಲ್ಲದೆ, ಸ್ಮಾರ್ಟ್ ವಾಚ್ ಡೈಲಿ ರಿಮೆಂಡರ ವೆದರ್ ರಿಪೋರ್ಟ್ ಅಪ್ಡೇಟ್ ಮತ್ತು ಇತ್ತೀಚಿನ ಸ್ಟಾಕ್ ಮಾರುಕಟ್ಟೆ ಅಪ್ಡೇಟ್ ಗಳನ್ನೂ ತೋರಿಸುತ್ತದೆ. ಬ್ಲೂಟೂತ್ v5.2, IP68 ರೇಟಿಂಗ್ನೊಂದಿಗೆ ವಾಚ್ ಬಿಡುಗಡೆಯಾಗುತ್ತಿದೆ.
Noise ColorFit Caliber Buzz: A smart watch with amazing features at a low price…