Nokia X30 5G : 48,999 ರೂ ಗೆ ಹೊಸ ನೋಕಿಯಾ 5G ಮೊಬೈಲ್ ಬಿಡುಗಡೆ….
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ Nokia X30 5G ಮೊಬೈಲ್ ಅನ್ನ ಲಾಂಚ್ ಮಾಡಿದ್ದ Nokia ಇದೀಗ ಭಾರತದಲ್ಲಿ ಮೊಬೈಲ್ ಅನ್ನ ಬಿಡುಗಡೆ ಮಾಡಿದೆ. 6.43 ಇಂಚಿನ 90 Hz AMOLED ಡಿಸ್ಪ್ಲೆಯೊಂದಿಗೆ ಮೊಬೈಲ್ ಬಿಡುಗಡೆಯಾಗಿದೆ. Nokia X30 5G ಸ್ನಾಪ್ಡ್ರಾಗನ್ 695 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಈ ಫೋನ್ ಹೆಚ್ಚು ಪರಿಸರ ಸ್ನೇಹಿ ಎಂದು ಕಂಪನಿ ಹೇಳಿಕೊಂಡಿದೆ. 100% ಮರುಬಳಕೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು 65% ಮರುಬಳಕೆಯ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ.
Nokia X30 5G ನ ಅತ್ಯುತ್ತಮ ವೈಶಿಷ್ಟ್ಯಗಳು
X30 5G ಮೊಬೈಲ್ ನಲ್ಲಿ ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಚಿತ್ರಗಳನ್ನ ಕೊಡುತ್ತದೆ, ಕಂಪನಿ ಮೂರು ವರ್ಷಗಳ OS ಅಪ್ಡೇಟ್ ಮತ್ತು monthly security updates ಗಳ ಭರವಸೆ ನೀಡುತ್ತದೆ. ಜೊತೆಗೆ ಎರಡು ದಿನಗಳ ಬ್ಯಾಟರಿ ಬ್ಯಾಕಪ್ ಭರವಸೆಯನ್ನ ನೀಡಿದೆ.
Nokia X30 5G ವಿಶೇಷಣಗಳು
ಪೋಟೋಗ್ರಾಫಿಗಾಗಿ Nokia X30 5G ಯಲ್ಲಿ 50MP ಪ್ಯೂರ್‌ವ್ಯೂ ಕ್ಯಾಮೆರಾ, 13MP ಅಲ್ಟ್ರಾವೈಡ್ ಕ್ಯಾಮೆರಾ, ನೈಟ್ ಮೋಡ್ 2.0 ಮತ್ತು ಡಾರ್ಕ್ ವಿಷನ್ ಫೀಚರ್ ನೀಡಲಾಗಿದೆ. ಸೆಲ್ಫಿಗಳಿಗಾಗಿ, 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ ಮತ್ತು ಕ್ಯಾಮೆರಾಗೆ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ನೀಡಲಾಗಿದೆ. 33W ವೇಗದ ಚಾರ್ಜಿಂಗ್ ಗೆ ಬೆಂಬಲದೊಂದಿಗೆ 4,200mAh ಗಾತ್ರದ ಬ್ಯಾಟರಿ ನೀಡಲಾಗಿದೆ.
Nokia X30 5G ಬೆಲೆ
Nokia X30 5G ಈಗಾಗಲೇ ಭಾರತದಲ್ಲಿ ಕ್ಲೌಡಿ ಬ್ಲೂ ಅಥವಾ ಐಸ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.
8/256 GB ಮೆಮೊರಿ/ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ 48,999 ರೂ.ಗಳ ಮುಂಗಡ ಬುಕ್ಕಿಂಗ್ ಗೆ ಲಭ್ಯವಿದೆ. 5,799 ಮೌಲ್ಯದ ಲಾಂಚ್ ಆಫರ್ ನೀಡಲಾಗಿದ್ದು, 33W ವೇಗದ ಚಾರ್ಜರ್, ನೋಕಿಯಾ ಕಂಫರ್ಟ್ ಇಯರ್‌ಬಡ್‌ಗಳನ್ನ ನೀಡಲಾಗುತ್ತದೆ. ಫೆಬ್ರವರಿ 20 ರಿಂದ Amazon ಮತ್ತು Nokia.com ನಲ್ಲಿ ಫೋನ್ ಪ್ರತ್ಯೇಕವಾಗಿ ಮಾರಾಟವಾಗಲಿದೆ.
Nokia X30 5G: New Nokia 5G mobile launched at Rs 48,999…