ಕಿಮ್ ಜಾಂಗ್ ನ ಉತ್ತರ ಕೊರಿಯಾದಲ್ಲಿ  ಬಾಲ ಕಾರ್ಮಿಕ ನೀತಿ…?

1 min read

ಕಿಮ್ ಜಾಂಗ್ ನ ಉತ್ತರ ಕೊರಿಯಾದಲ್ಲಿ  ಬಾಲ ಕಾರ್ಮಿಕ ನೀತಿ…?

ಹುಚ್ಚ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರದ ಕಪಿ ಮುಷ್ಠಿಯಲ್ಲಿ ಅಲ್ಲಿನ ಜನರು  ಹಿಂಸೆ ಪಡುತ್ತಿದ್ದಾರೆ.. ಆದ್ರೆ ಅದು ಅವರಿಗೆ ರೂಢಿಯೂ ಆಗೋಗಿದೆ..  ಅಲ್ಲಿನ ಹುಚ್ಚು ಕಾನೂನುಗಳು , ನೀತಿ ನಿಯಮಗಳು  ಜಗತ್ತಿಗೆ ಜನರಿಗೆ ತಿಳಿಯದ ವಿಚಾರವೇನಲ್ಲಾ..

ಇದೀಗ ಅಲ್ಲಿಯದ್ದೇ ಮಾದ್ಯಮಗಳು ಉತ್ತರ ಕೊರಿಯಾ ಹಾಗೂ  ಅಲ್ಲಿನ ಆಡಳಿತದ ಕುರಿತಾಗಿ ಮತ್ತೊಂದು ವಿಚಾರದ ಬಗ್ಗೆ ವರದಿ ಮಾಡಿವೆ.. ಹೌದು.. ಉತ್ತರ ಕೊರಿಯಾ ಬಾಲ ಕಾರ್ಮಿಕ ಪದ್ದತಿ ಅನುಸರಿಸುತಿದ್ಯಾ ಎಂಬ ಅನುಮಾನಗಳು ಮೂಡತೊಡಗಿವೆ.

ಸರ್ಕಾರಿ ಗಣಿ ಮತ್ತು ತೋಟಗಳಲ್ಲಿ ಹದಿಹರೆಯದ ಅನಾಥ ಮಕ್ಕಳು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಉತ್ತರ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ನೂರಾರು ಮಕ್ಕಳು ಪ್ರಜ್ಞಾಪೂರ್ಕವಾಗಿ ಮತ್ತು ಧೈರ್ಯದಿಂದ ದೇಶಕ್ಕಾಗಿ ದೈಹಿಕ ಶ್ರಮದಾನದಲ್ಲಿ ತೊಡಗಿದ್ದಾರೆ ಎಂದು ‘ಕೊರಿಯನ್‌ ಸೆಂಟ್ರಲ್‌ ನ್ಯುಸ್‌ ಏಜೆನ್ಸಿ’  ವರದಿ ಮಾಡಿದೆ.

 ಆದ್ರೆ ಯಾರೊಬ್ಬರ ವಯಸ್ಸನ್ನ ಬಿಟ್ಟುಕೊಟ್ಟಿಲ್ಲ. ಫೋಟೋಗಳನ್ನ ನೋಡಿದ್ರೆ ಅವರೆಲ್ಲರೂ ಅಪ್ರಪ್ತರೇ , ಹದಿಹರೆಯದವರೇ ಎಂಬುದು ಬಹಿರಂಗವಾಗಿದೆ.  ಹೀಗಾಗಿ ಉತ್ತರ ಕೊರಿಯಾ ಬಲವಂತದ ಬಾಲ ಕಾರ್ಮಿಕ ಪದ್ಧತಿಯನ್ನು ಪಾಲಿಸುತ್ತಿದೆ  ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.

ಹೀಗೆ  ಮಾನವ ಹಕ್ಕುಗಳ ಸಂಘಟನೆಗಳು ಉತ್ತರ ಕೊರಿಯಾ ನೀತಿ ಖಂಡಿಸಿ ಆರೋಪ ಮಾಡುತ್ತಿರುವುದು ಇದೇನು ಮೊದಲಲ್ಲ. ಈ ಜ ಹಿಂದಿನಿಂದಲೂ ಈ ರೀತಿಯಾದ ಾರೋಪಗಳನ್ನ ಮಾಡಿದೆ. ಆದ್ರೆ ಉತ್ತರ ಕೊರಿಯಾ ಇದನ್ನು ನಿರಾಕರಿಸುತ್ತಲೇ ಬಂದಿದೆ.

 ಮಾನವ ಹಕ್ಕುಗಳ ಪಾಲನೆ ಕುರಿತು 2020ರಲ್ಲಿ ಅಮೆರಿಕ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಉತ್ತರ ಕೊರಿಯಾದಲ್ಲಿ ಬಾಲ ಕಾರ್ಮಿಕ ಪದ್ಧತಿಯು ಕೆಟ್ಟ ಸ್ವರೂಪದಲ್ಲಿದೆ ಎನ್ನಲಾಗಿತ್ತು. ಕೆಲವೊಮ್ಮೆ ಶಾಲಾ ಮಕ್ಕಳನ್ನು ರಸ್ತೆಗಳಲ್ಲಿ ಹಿಮ ತೆರವು ಮಾಡಲು, ವಿಶೇಷ ಯೋಜನೆಗಳನ್ನು ಪೂರ್ಣಗೊಳಿಸಲು ಬಳಸಿಕೊಳ್ಳಲಾಗುತ್ತದೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.

ಕೊರೊನ ಮಹಾಮಾರಿ:

 ಕೊರೊನ ವೈರಸ್  ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.

 ತಪ್ಪದೇ ಹೊರಗೆ ಹೋದಾಗ  ಸ್ವಚ್ಛವಾದ ಮಾಸ್ಕ ಧರಿಸಿ.

 ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .

 ಜನ ನಿಬಿಡ ಪ್ರದೇಶದಿಂದ ದೂರವಿರಿ.

 ಮನೆ ಸಮೀಪದ  ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.

 ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.

 ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ  ಸ್ನಾನ ಮಾಡಿ.

 ನಮ್ಮ  ಹೋರಾಟ ಕೊರೊನ ನಿರ್ಮೂಲನೆಯತ್ತ.

 ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd