Note Ban : ನೋಟು ಅಮಾನ್ಯಕರಣ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು..!!
2016 ರಲ್ಲಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದಾಗ ಇಡೀ ದೇಶಾದ್ಯಂತ ಜನರಿಗೆ ನಾನಾ ತೊಂದರೆಗಳಾಗಿತ್ತು..
ಆ ಸಂಬರ್ಭದಲ್ಲಿ 500 , 1000 ರೂಪಾಯಿಯ ಮುಖಬೆಲೆಯ ಹಳೆಯ ನೋಟುಗಳನ್ನ ಬ್ಯಾನ್ ಮಾಡಿ ಹೊಸ 500 , 2000 ರೂ ನೋಟುಗಳನ್ನ ಪರಿಯಚಿಸಲಾಯ್ತು..
ಆದ್ರೆ ನೋಟು ಅಮಾನ್ಯೀಕರಣದ ಕೇಂದ್ರ ಸರ್ಕಾರದ ಆದೇಶವನ್ನ ಪ್ರಶ್ನಿಸಿ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿತ್ತು..
ಈ ಅರ್ಜಿಗಳ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.. ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಸಿಂಧುತ್ವವವನ್ನ ಭಾರತದ ಸರ್ವೋಚ್ಛ ನ್ಯಾಯಾಲಯವು ಎತ್ತಿ ಹಿಡಿದಿದೆ..
ಅಲ್ಲದೇ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.. ನೋಟು ಬದಲಾಯಿಸಲು ನೀಡಿದ ಕಾಲಾವಕಾಶ ಸರಿಯಾಗಿದೆ..
ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ RBI ಮತ್ತು ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಿದ್ದವು.. ಅಂತಹ ಕ್ರಮವನ್ನ ತರಲು ಸಮಂಜಸ ಸಂಬಂಧವಿತ್ತುಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ..
ನೋಟು ಅಮಾನ್ಯಕರಣ ಪ್ರಶ್ನಿಸಿ ನ್ಯಾಯಾಲಯಕ್ಕೆ ಒಟ್ಟು 58 ಅರ್ಜಿಗಳು ಸಲ್ಲಿಕೆಯಾಗಿದ್ದವು..