ಗಮನಿಸಿ : ನಾಳೆಯಿಂದ ನೈಟ್ ಕರ್ಫ್ಯೂ ಸಮಯ ಬದಲು night curfew
ಬೆಂಗಳೂರು : ನಾಳೆಗೆ ಮೂರನೇ ಹಂತದ ಅಲ್ ಲಾಕ್ ಅವಧಿ ಮುಗಿಯಲಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಇನ್ನಷ್ಟು ಲಾಕ್ ಡೌನ್ ಸಡಿಲಿಕೆಗೆ ನಿರ್ಧರಿಸಿದ್ದಾರೆ.
ನಾಲ್ಕನೇ ಹಂತದ ಲಾಕ್ ಡೌನ್ ಸಡಿಳಿಕೆ ಬಗ್ಗೆ ಚರ್ಚೆ ನಡೆಸಲು ಇಂದು ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ಉಸ್ತುವಾರಿ, ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ಸಭೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಅಲ್ಲದೇ ಈಗಿರುವ ನೈಟ್ ಕರ್ಫ್ಯೂ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದ್ದು, ರಾತ್ರಿ 10ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕಫ್ರ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಇದಲ್ಲದೆ ಜುಲೈ 26ರಿಂದ ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಆದ್ರೆ ತರಗತಿಗಳಿಗೆ ಬರುವ ವಿದ್ಯಾರ್ಥಿ, ಉಪನ್ಯಾಸಕರು, ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕಾಗಿರುತ್ತದೆ.
ಇನ್ನುಳಿದಂತೆ ಪಬ್, ಸಿಮ್ಮಿಂಗ್ ಪೂಲ್ ಗೆ ನಿರ್ಬಂದ ಮುಂದುವರೆದಿದೆ.