Nothing phone (1) – ಇಂದು ಬಿಡುಗಡೆಯಾಗಲಿದೆ ನಥಿಂಗ್ ಪೋನ್ 1 ಸ್ಮಾರ್ಟ್ ಫೋನ್
ಹೊಸ ಟೆಕ್ ಕಂಪನಿ ನಥಿಂಗ್ ತನ್ನ ಮೊದಲ ಸ್ಮಾರ್ಟ್ಫೋನ್ ನಥಿಂಗ್ ಫೋನ್ 1 ನ್ನ ಜಾಗತಿಕವಾಗಿ ಇಂದು ಅಂದರೆ ಜುಲೈ 12 ರಂದು ಬಿಡುಗಡೆ ಮಾಡುತ್ತಿದೆ. OnePlus ಸಹ-ಸಂಸ್ಥಾಪಕ ಕಾರ್ಲ್ ಪೀ ಈ ಕಂಪನಿಯನ್ನು ಸ್ಥಾಪಕರು. ಕಂಪನಿಯ ಮೊದಲ ಉತ್ಪನ್ನವಾಗಿ ನಥಿಂಗ್ ಬಡ್ಸ್ ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದರು.
ನಥಿಂಗ್ ಫೋನ್ 1 ರ ಬಿಡುಗಡೆ ಕಾರ್ಯಕ್ರಮವು ಭಾರತೀಯ ಕಾಲಮಾನ ರಾತ್ರಿ 8.30 ರಿಂದ ನಡೆಯಲಿದೆ. ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್ನ ಹೊರತಾಗಿ, ನಥಿಂಗ್ ಫೋನ್ 1 ರ ಲಾಂಚ್ ಈವೆಂಟ್ ಅನ್ನು ಕಂಪನಿಯ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ನಲ್ಲಿ ನೋಡಬಹುದು ಕಾಣಬಹುದು. ಬಿಡುಗಡೆ ಕಾರ್ಯಕ್ರಮವನ್ನು ಕಂಪನಿಯ ವೆಬ್ಸೈಟ್ನಲ್ಲಿಯೂ ಪ್ರಸಾರ ಮಾಡಲಾಗುತ್ತದೆ.
@nothing Phone 1 Product video.#NothingPhone1 is launching tonight. @getpeid pic.twitter.com/OluePEbbgz
— Aman Ch (@AmanCh_) July 12, 2022
ನಥಿಂಗ್ ಫೋನ್ 1 ನ ಅಂದಾಜು ಬೆಲೆ
ನಥಿಂಗ್ ಫೋನ್ 1 ನ ಬೆಲೆ ರೂ 30,000 ರಿಂದ ರೂ 40,000 ವರೆಗೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಅಮೆಜಾನ್ ಇಂಡಿಯಾದಿಂದ ಮಾರಾಟವಾಗಲಿದೆ. 8 GB RAM ಮತ್ತು 128 GB ಸ್ಟೋರೇಜ್ ಹೊಂದಿರುವ ಮೊಬೈಲ್ ನ ಬೆಲೆ ಅಮೆಜಾನ್ ಜರ್ಮನಿ ವೆಬ್ಸೈಟ್ನಲ್ಲಿ 469.99 ಯುರೋಗಳಷ್ಟಿದೆ. ಇಂಡಿಯಾದಲ್ಲಿ ಇದರ ಬೆಲೆ ಸುಮಾರು 37,900 ರೂ.ಗಳಷ್ಟಾಗಲಿದೆ.