Omicron ಆತಂಕ: ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸುಗಳೇನು? Omicron Anxiety
ಬೆಂಗಳೂರು: ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಎರಡು ಡೋಸ್ ಕಡ್ಡಾಯಗೊಳಿಸಿ ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳು ಹೀಗಿವೆ
*ಜನದಟ್ಟಣೆಯ ಪ್ರದೇಶಗಳಲ್ಲಿ ಕಡ್ಡಾಯ ಕೋವಿಡ್ ತಪಾಸಣೆ ಮಾಡಬೇಕು
*ಶಾಲಾ ಮಕ್ಕಳಿಗೆ ವಾರಕ್ಕೆ ಶೇ. ಐದರಷ್ಟು ಕೋವಿಡ್ ಪರೀಕ್ಷೆ ಕಡ್ಡಾಯ
*ಸಭೆ ಸಮಾರಂಭಗಳಲ್ಲಿ ಐನೂರಕ್ಕಿಂತ ಹೆಚ್ಚು ಜನರು ಭಾಗಿಯಾಗಲು ಅವಕಾಶ ನೀಡಬಾರದು
*ಒಳಾಂಗಣ ಸಭಾಂಗಣದಲ್ಲಿ 200 ಮಂದಿಗೆ ಅವಕಾಶ

*ಮಾಲ್,ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವಸತಿ ಗೃಹಗಳಲ್ಲಿ ವಿಶೇಷ ಲಸಿಕಾ ಅಭಿಯಾನ
*ಓಮಿಕ್ರಾನ್ ವೈರಾಣು ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಕ್ರಮ
*ಶಾಲಾ ಕಾಲೇಜು ಮುಚ್ಚುವ ಅಗತ್ಯವಿಲ್ಲ, ಆದರೆ ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕು
*ಅಂತರಾಷ್ಟ್ರೀಯ ಪ್ರಯಾಣಿಕರಿಗೆ ನೆಗೆಟಿವ್ ವರದಿ ಇದ್ದರೂ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
*ಮನೆಯಲ್ಲಿ ಕ್ವಾರಂಟೈನ್ ಇರುವವರ ಮೇಲೆ ನಿಗಾ
*ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಬಲದಲ್ಲಿ ಜನೋಮಿಕ್ ಸ್ವೀಕ್ವೆನ್ಸ್ ಗೆ ಒಳಪಡಿಸಬೇಕು
*ಕಳೆದ 14 ದಿನಗಳ ಹಿಂದೆ ಬಂದ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಆರ್ ಟಿ ಪಿ ಸಿ ಆರ್
*ಬೌಂರಿಂಗ್ ಆಸ್ಪತ್ರೆಯಲ್ಲಿ ಓಮಿಕ್ರಾನ್ ವೈರಾಣು ಚಿಕಿತ್ಸೆ ಸೌಲಭ್ಯಕ್ಕೆ ವ್ಯವಸ್ಥೆ
*ರೋಗ ಲಕ್ಷಣಗಳು ಇರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪ್ರತ್ಯೇಕ ಚಿಕಿತ್ಸೆಗೆ ಕ್ರಮ
*ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ವ್ಯಾಕ್ಸಿನ್ ಕಡ್ಡಾಯ ಮಾಡಿ








