ಐಸಿಸಿಯು ನೂತನ ಏಕದಿನ ರ್ಯಾಂಕಿಂಗ್ ನಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತೀಯ ಆಟಗಾರರು ಮೇಲುಗೈ ಸಾಧಿಸಿದ್ದಾರೆ.
ಶ್ವಕಪ್ ನಂತರ ಯಾವುದೇ ಏಕದಿನ ಸರಣಿ ಆಡದಿದ್ದರೂ, ಭಾರತೀಯ ಆಟಗಾರರು ಏಕದಿನ ಶ್ರೇಯಾಂಕದಲ್ಲಿ ಟಾಪ್ ಐದರೊಳಗೆ ಕಾಣಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಪಾಕ್ ನ ಮಾಜಿ ನಾಯಕ ಬಾಬರ್ ಅಜಂ ಅಗ್ರಸ್ಥಾನದಲ್ಲಿದ್ದಾರೆ. ಶುಭ್ಮನ್ ಗಿಲ್ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.
ಕಳೆದ ಶ್ರೇಯಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಮೇಲೇರಿ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಐರ್ಲೆಂಡ್ ಕ್ರಿಕೆಟರ್ ಹ್ಯಾರಿ ಟೆಕ್ಟರ್ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ನ್ಯೂಜಿಲೆಂಡ್ನ ಡೇರಿಲ್ ಮಿಚೆಲ್ 728 ರೇಟಿಂಗ್ನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ ಏಳನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ, ಇಂಗ್ಲೆಂಡ್ನ ಡೇವಿಡ್ ಮಲಾನ್, ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಕ್ರಮವಾಗಿ 8 ರಿಂದ 10ನೇ ಸ್ಥಾನದಲ್ಲಿದ್ದಾರೆ.