OnePlus Nord 2T 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ…
Oneplus ಕಂಪನಿ ಮಧ್ಯಮ ಶ್ರೇಣಿಯ OnePlus Nord 2T 5G ಸ್ಮಾರ್ಟ್ಫೋನ್ ನ್ನ ಕಳೆದ ವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. OnePlus Nord 2T ಸ್ಮಾರ್ಟ್ಫೋನ್ ಈಗಾಗಲೇ ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಲಭ್ಯವಿದ್ದು, ಭಾರತದಲ್ಲಿ ಇಂದಿನಿಂದ (ಜುಲೈ 5) ಹೊಸ OnePlus ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಿದೆ.
OnePlus Nord 2T 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಚಿಪ್ಸೆಟ್ ಹೊಂದಿದ್ದು, OxygenOS 12.1 ಆಪರೆಟಿಂಗ್ ಸಿಸ್ಟಮ್ ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹೊಸ 5G ಸ್ಮಾರ್ಟ್ಫೋನ್ 80W SUPERVOOC ವೇಗದ ಚಾರ್ಜಿಂಗ್ ಸೌಲಭ್ಯವನ್ನ ಹೊಂದಿದೆ.
OnePlus Nord 2T 5G: ಬೆಲೆ
OnePlus Nord 2T 5G ಮೊಬೈಲ ನ್ನ OnePlus.in, OnePlus ಸ್ಟೋರ್ ಅಪ್ಲಿಕೇಶನ್, Amazon.in, OnePlus ರೀಟೇಲ್ ಮಳಿಗೆಗಳು ಮತ್ತು ಅಧಿಕೃತ ಪಾಲುದಾರ ಅಂಗಡಿಗಳಲ್ಲಿ ಖರೀದಿಸಬಹುದು. 8GB + 128GB ಮತ್ತು 12GB+256GB ಯ ಎರಡು ವಿಧಗಳಲ್ಲಿ ಲಭ್ಯವಿದೆ. ಬೆಲೆ ಕ್ರಮವಾಗಿ ರೂ 28,999 ಮತ್ತು ರೂ 33,999 ಯಷ್ಟಿದೆ. OnePlus Nord 2T 5G ಮೊಬೈಲ್ ಎರಡು ಬಣ್ಣಗಳಲ್ಲಿ ಆಯ್ಕೆಗೆ ಲಭ್ಯವುದೆ. ಒಂದು ಗ್ರೇ ಶಾಡೋ ಮತ್ತೊಂದು ಜೇಡ್ ಫಾಗ್.
ಜುಲೈ 5 ರಿಂದ ಜುಲೈ 11 ರವರೆಗೆ, ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು Amazon.in, OnePlus.in, OnePlus Store App, OnePlus ಮಳಿಗೆಗಳಲ್ಲಿ ಖರೀದಿಸಿದರೆ 1500 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಗೆ ಪಡೆಯಬಹುದು. ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಜುಲೈ ಅಂತ್ಯದವರೆಗೆ 3 ತಿಂಗಳವರೆಗೆ ನೊ ಕಾಸ್ಟ್ EMI ಯನ್ನ ಸಹ ಪಡೆಯಬಹುದು.