ನೆಲಮಂಗಲ: ಆನ್ಲೈನ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 6 ಜನರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇಲೆ ಸಿಸಿಬಿ (CCB) ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಅಧಿಕಾರಿ ಹನುಮಂತರಾಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಮಂಜುನಾಥ್, ಶಿವರಾಜ್, ಉಮೇಶ್, ಬಸವರಾಜ್, ರಾಯ, ಪ್ರದೀಪ್ ಬಂಧಿತರು. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಸುಂದರ ಹುಡುಗಿಯರ ಫೋಟೊಗಳನ್ನು ವೆಬ್ ಸೈಟ್ ಮೂಲಕ www.locanto.com ಗೆ ಅಪ್ಲೋಡ್ ಮಾಡಿ, ಮೊಬೈಲ್ ನಂಬರ್ಗಳ ಮೂಲಕ ಲಾಗಿನ್ ಆಗುವ ಗಿರಾಕಿಗಳನ್ನು ಸೆಳೆಯುತ್ತಿದ್ದರು. ಗ್ರಾಹಕರು ಹೇಳಿದ ಯುವತಿಯರನ್ನು ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.