ಇಂದಿನಿಂದ ಕೇರಳ ಪ್ರಯಾಣಿಕರು ದ.ಕ. ಪ್ರವೇಶಿಸಲು ಕೇವಲ 4 ಗಡಿಮಾರ್ಗ ಮೂಲಕ ಮಾತ್ರ ಅವಕಾಶ
ಮಂಗಳೂರು, ಫೆಬ್ರವರಿ22: ನೆರೆಯ ಕೇರಳದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ನಾಲ್ಕು ಅಂತರರಾಜ್ಯ ಗಡಿಗಳನ್ನು ಮಾತ್ರ ತೆರೆಯಲು ಆದೇಶ ಹೊರಡಿಸಿದ್ದಾರೆ.
ಮಂಗಳೂರಿನ ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ-ಮುಡ್ನೂರು, ಸುಳ್ಯದ ಜಾಲ್ಸೂರು ಗಡಿ ಮಾರ್ಗಗಳ ಮುಖಾಂತರ ಮಾತ್ರ ಕೇರಳದಿಂದ ಜಿಲ್ಲೆಗೆ ಪ್ರವೇಶ ಮಾಡಬಹುದು.
ಇಂದಿನಿಂದ (ಫೆಬ್ರವರಿ 22) ಎಲ್ಲಾ ಇತರ ಅಂತರರಾಜ್ಯ ಗಡಿಗಳನ್ನು ಮುಚ್ಚಲಾಗುವುದು. ಕೇರಳದ ಪ್ರಯಾಣಿಕರು ಕರ್ನಾಟಕಕ್ಕೆ ಈ ನಾಲ್ಕು ಚೆಕ್ ಪೋಸ್ಟ್‌ಗಳ ಮೂಲಕವೇ ಪ್ರವೇಶಿಸಿ ಮರಳಬೇಕಾಗುತ್ತದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಡಿಸಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸುವವರನ್ನು ಪರೀಕ್ಷಿಸಲು ಆರೋಗ್ಯ ಇಲಾಖೆ ಎಲ್ಲಾ ನಾಲ್ಕು ಚೆಕ್ ಪೋಸ್ಟ್‌ಗಳಲ್ಲಿ ತಂಡಗಳನ್ನು ನಿಯೋಜಿಸಲಿದೆ ಎಂದು ಡಿಸಿ ತಿಳಿಸಿದ್ದಾರೆ. ಜಿಲ್ಲೆಗೆ ಪ್ರವೇಶಿಸುವವರೆಲ್ಲರೂ ತಮ್ಮ ಪ್ರಯಾಣಕ್ಕೆ 72 ಗಂಟೆಗಳ ಒಳಗೆ ಅಥವಾ ಮೀರದಂತೆ ಪಡೆದ ಕೋವಿಡ್ -19 ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
https://twitter.com/SaakshaTv/status/1361872160071897093?s=19
https://twitter.com/SaakshaTv/status/1361837405133697026?s=19
ಮಂಗಳೂರು ಬಿಸ್ಕೂಟ್ ಅಂಬಡೆ https://t.co/OH0REozdzE
— Saaksha TV (@SaakshaTv) February 16, 2021