ಹೊಸ ವರ್ಷದ ದಿನವೂ ವರ್ಕೌಟ್, ಕತ್ರೀನಾ ಬದ್ಧತೆಗೆ ಮೆಚ್ಚುಗೆ….
1 min read
ಹೊಸ ವರ್ಷದ ದಿನವೂ ವರ್ಕೌಟ್, ಕತ್ರೀನಾ ಬದ್ಧತೆಗೆ ಮೆಚ್ಚುಗೆ….
ಹೊಸ ವರ್ಷವನ್ನ ಆಚರಿಸಕೊಳ್ಳಲು ಹಲವು ಬಾಲಿವುಡ್ ಸೆಲೆಬ್ರಿಟಿಗಳು ವಿವಿಧ ಸೆಲೆಬ್ರೆಟಿಗಳು ವಿವಿಧ ಸ್ಥಳಗಳಿಗೆ ಜಾಗಗಳಿಗೆ ಹೋಗಿಬಂದಿದ್ದಾರೆ…. ಹೊಸ ವರ್ಷವನ್ನ ಸಂಭ್ರಮದಿಂದ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಬಾಲಿವುಡ್ ನ ಹೊಸ ಜೋಡಿ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಕತ್ರೀನಾ ಕೈಫ್ ಮಾತ್ರ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ.
ಹೊಸ ವರ್ಷದ ಹಿಂದಿನ ದಿನ ಕತ್ರೀನಾ ಕೈಫ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ವನ್ನ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಕತ್ರೀನಾ ಫ್ಯಾನ್ಸ್ ವೃತ್ತಿ ಜೀವನದ ಬದ್ಧತೆಯನ್ನ ಹಂಚಿಕೊಂಡಿದ್ದಾರೆ. 2021 ರ ಕೊನೆಯ ದಿನವನ್ನೂ ತಪ್ಪಿಸದೆ ವರ್ಕೌಟ್ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ…
ಡಿಸೆಂಬರ್ 9 ರಂದು ಮದುವೆಯಾಗಿದ್ದ ಈ ಜೋಡಿ ಕೆಲವೇ ದಿನಗಳಲ್ಲಿ ಹನಿಮೂನ್ ಟ್ರಿಪ್ ಮುಗಿಸಿಕೊಂಡು ಬಂದು ನಂತರವೇ ಚಿತ್ರೀಕರಣಕ್ಕೆ ತೆರಳಿತ್ತು. ಈ ಮೂಲಕ ವಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನವೇ ನಮಗೆ ಮುಖ್ಯ ಎಂಬುದನ್ನ ಈ ಜೋಡಿ ತಿಳಿಸಿತ್ತು.