1983 ವಿಶ್ವಕಪ್ ಸವಿನೆನಪು – ಚೊಚ್ಚಲ ವಿಶ್ವಕಪ್ ಗೆದ್ದು 37 ವರ್ಷ…
ಜೂನ್ 25, 1983 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಇದೇ ದಿನದ 37 ವರ್ಷಗಳ ಹಿಂದೆ ಭಾರತ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು ಮತ್ತು ವಿಶ್ವಕಪ್‌ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್‌ನ ಆಳ್ವಿಕೆ ಕೊನೆಗೊಳಿಸಿತ್ತು.
ಚೊಚ್ಚಲ ವಿಶ್ವಕಪ್ ಗೆದ್ದ ನಂತರ ಭಾರತದಲ್ಲಿ ಕ್ರಿಕೆಟ್ ಪರಿಸ್ಥಿತಿಯೇ ಬದಲಾಯಿತು. ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಾಯಿತು ಮತ್ತು ಈಗ ಬಿಸಿಸಿಐ ವಿಶ್ವದ ಅತಿದೊಡ್ಡ ಕ್ರಿಕೆಟ್ ಮಂಡಳಿಯಾಗಿದೆ. ಈ ಟೂರ್ನಿಯಲ್ಲಿ ಭಾರತದ ಯುವ ತಂಡ ಯಾರೂ ಊಹಿಸದ ಸಾಧನೆ ಮಾಡಿತ್ತು.
1980ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡ ಅತ್ಯಂತ ಬಲಿಷ್ಠವಾಗಿತ್ತು. ಇಂಗ್ಲೆಂಡ್ ನೆಲದಲ್ಲಿ ಸತತ ಮೂರನೇ ಬಾರಿಗೆ ವಿಶ್ವಕಪ್ ಆಯೋಜನೆಯಾಗಿತ್ತು. ಇಲ್ಲಿನ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯಕವಾಗಿತ್ತು. ವೆಸ್ಟ್ ಇಂಡೀಸ್ ಒಂದಕ್ಕಿಂತ ಹೆಚ್ಚು ವೇಗದ ಬೌಲರ್‌ಗಳನ್ನು ಹೊಂದಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತ ಫೈನಲ್ ತಲುಪುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಯುವ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಅದ್ಭುತಗಳನ್ನು ಮಾಡಿ ವಿಶ್ವಕಪ್ ಗೆದ್ದಿತು.








