ಬೆಂಗಳೂರು : ಇಂದು ರಾಜ್ಯದಲ್ಲಿ 16 ಮಂದಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿರುವುದಾಗಿ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತಂತೆ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸುರೇಶ್ ಕುಮಾರ್, ಬಾಗಲಕೋಟೆಯಲ್ಲಿ ಕೊರೊನಾ ಸೋಂಕಿನಿಂದಾಗಿ 75 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇವರ ಸಾವಿನ ಮೂಲಕ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 4ಕ್ಕೆ ಮುಟ್ಟಿದೆ. ಅಲ್ಲದೇ ಇಂದು 16 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ ಇಂದು 144ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾವಾರ ಕೊರೊನಾ ಸೋಂಕಿತ ವಿವರ ಹೀಗಿದೆ
ಬೆಂಗಳೂರು – 55
ಮೈಸೂರು – 28
ಚಿಕ್ಕಬಳ್ಳಾಪುರ – 07
ದಕ್ಷಿಣ ಕನ್ನಡ – 12
ಉತ್ತರಕನ್ನಡ – 08
ಕಲಬುರ್ಗಿ – 05
ದಾವಣಗೆರೆ – 03
ಉಡುಪಿ – 03
ಬಳ್ಳಾರಿ – 05
ತುಮಕೂರು – 01
ಕೊಡಗು – 01
ಧಾರವಾಡ – 01
ಬೀದರ್ – 10
ಬಾಗಲಕೋಟೆ – 01
ಬೆಳಗಾವಿ – 03
ಬೆಂಗಳೂರು ಗ್ರಾಮಾಂತರ – 01








