RRR | ಓಟಿಟಿಯಲ್ಲಿ ಆರ್ ಆರ್ ಆರ್ ನೋಡಲು ದಡ್ಡು ನೀಡಬೇಕಾ..?
ಆರ್ ಆರ್ ಆರ್ ಮಾರ್ಚ್ 25 ರಂದು ರಿಲೀಸ್ ಆಗಿ ದಾಖಲೆಯ ಯಶಸ್ಸು ಕಂಡಿರುವ ಸಿನಿಮಾ. ಜೂನಿಯರ್ ಎನ್ ಟಿಆರ್ ಕೊಮುರಂ ಭೀಮ್ ಆಗಿ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜ್ ಆಗಿ ಕಾಣಿಸಿಕೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ 1100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಏತನ್ಮಧ್ಯೆ RRR ಶೀಘ್ರದಲ್ಲೇ OTT ನಲ್ಲಿ ಸದ್ದು ಮಾಡಲಿದೆ. ಈ ಸಂದರ್ಭದಲ್ಲಿ, ಡಿಜಿಟಲ್ ಪ್ರೇಕ್ಷಕರಿಗೆ ಒಂದು ಅಪ್‌ಡೇಟ್ ಆಘಾತಕಾರಿಯಾಗಿದೆ. ಈ OTT ಕಂಪನಿಗಳು RRR ಅನ್ನು OTT ನಲ್ಲಿ ಪೇ ಪರ್ ವ್ಯೂ ಆಧಾರದ ಮೇಲೆ ಬಿಡುಗಡೆ ಮಾಡಲು ಯೋಜಿಸುತ್ತಿವೆಯಂತೆ. ಅಂದರೆ ಒಟಿಟಿಯಲ್ಲಿ ಈ ಸಿನಿಮಾ ನೋಡಬೇಕಾದರೆ ಇಲ್ಲೂ ಟಿಕೆಟ್ ಖರೀದಿಸಬೇಕಂತೆ.
ಆದ್ರೆ ಲಾಕ್‌ಡೌನ್‌ನಲ್ಲಿ ಸಣ್ಣ ಮತ್ತು ದೊಡ್ಡ ಚಲನಚಿತ್ರಗಳು ನೇರವಾಗಿ OTT ನಲ್ಲಿ ಬಿಡುಗಡೆಯಾಗಿದ್ದವು. ಆ ಸಿನಿಮಾಗಳನ್ನು ವೀಕ್ಷಿಸಲು ನಾವು ಪ್ರೀಮಿಯರ್‌ಗೆ ಹಣ ನೀಡಬೇಕಾಗಿತ್ತು. ಯಾಕಂದರೇ ಇದು ಡೈರೆಕ್ಟ್ ಒಟಿಟಿಯಲ್ಲಿ ಬಿಡುಗಡೆಯಾದ ಚಲನಚಿತ್ರಗಳಾಗಿದ್ದವು.
ott-rrr-movie-pay-view-format
ಆದ್ರೆ ಮೊದಲು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ನಂತರ ಓಟಿಟಿಯಲ್ಲಿ ನೋಡಬೇಕೆಂದರೇ ಪೇ ಪರ್ ವ್ಯೂ ಫಾರ್ಮೇಟ್ ಅನ್ನ ಫಾಲೋ ಮಾಡಬೇಕು ಎನ್ನುತ್ತಿದೆ ಓಟಿಟಿ ಪ್ರಿಮಿಯರ್ ಸಂಸ್ಥೆಗಳು.