ಕೋವಿಡ್ : ಆಮ್ಲಜನಕ ವಿಚಾರದಲ್ಲಿ ಕೇಂದ್ರ ಹೇಳಿದೆ ದೊಡ್ಡ ಸುಳ್ಳು..?

1 min read

ಕೋವಿಡ್ : ಆಮ್ಲಜನಕ ವಿಚಾರದಲ್ಲಿ ಕೇಂದ್ರ ಹೇಳಿದೆ ದೊಡ್ಡ ಸುಳ್ಳು..?

ನವದೆಹಲಿ : ಕೋವಿಡ್ 2ನೇ ಅಲೆ ಸಮದರ್ಭದಲ್ಲಿ ದೇಶದಲ್ಲಿ ಅದೆಷ್ಟೋ ಜನರ ಜೀವ ಹೋಗಿದೆ.. ವರದಿಗಳ ಪ್ರಕಾರ ಚಿಕಿತ್ಸೆ , ಸಿಗದೇ ಬೆಡ್ ಕೊರತೆಯಿಂದ ಮೂಕ್ಯವಾಗಿ ಆಮ್ಲಜನಕ ಕೊರತೆಯಿಂದಲೇ ಅನೇಕರು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.. ಆದ್ರೆ ಇತ್ತೀಚೆಗೆ ಕೇಂದ್ರ ಸರ್ಕಾರವು ಈ ಬಗ್ಗೆ ನೀಡಿರುವ ಹೇಳಿಕೆ ವಿಪಕ್ಷಗಳನ್ನ ಕೆರಳಿಸಿದೆ.. ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಯಾರೂ ಸತ್ತಿದ್ದು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.. ಆದ್ರೆ ಪ್ರತಿಪಕ್ಷಗಳು ಕೇಂದ್ರದ ಹೇಳಿಕೆಯನ್ನ ತೀವ್ರವಾಗಿ ಟೀಕಿಸುತ್ತಾ ಶುದ್ಧ ಸುಳ್ಳು ಹೇಳ್ತಿದೆ ಎಂದು  ಪದ್ರತಿಪಾದಿಸಿದ್ದಾರೆ.

“ಕೊರೊನಾದಿಂದ  ಬಚಾವಾಗೋದಕ್ಕೆ ಇರೋದೊಂದೇ ದಾರಿ ಲಸಿಕೆ ಹಾಕಿಸಿಕೊಳ್ಳುವುದು” – ಬೈಡನ್‌

ಈ ನಡುವೆ ಕೇಂದ್ರ ಸರ್ಕಾರದ ಹೇಳಿಕೆಯನ್ನು ದೆಹಲಿ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಕೇಂದ್ರವು ತನ್ನ ತಪ್ಪನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಹೇಳಿದ್ದಾರೆ. ನಿರ್ವಹಣೆ ವೈಫಲ್ಯ ಹಾಗೂ ಏಪ್ರಿಲ್ 13ರ ನಂತರ ತರಲಾದ ‘ಆಮ್ಲಜನಕ ವಿತರಣಾ ನೀತಿ’ಯಲ್ಲಿನ ಬದಲಾವಣೆಯಿಂದ ದೇಶದಾದ್ಯಂತ ಆಮ್ಲಜನಕ ಕೊರತೆ ಉಂಟಾಗಿ, ಸಾವುಗಳು ಸಂಭವಿಸಿದವು ಎಂದು ಆರೋಪಿಸಿದ್ದಾರೆ.

ಕೋವಿಡ್ 2ನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ ಎಲ್ಲಾ ಸಾವುಗಳ ಬಗ್ಗೆ ದೆಹಲಿ ಸರ್ಕಾರ ತನಿಖೆ ನಡೆಸಲು ಸಿದ್ಧವಿದ್ದು, ಸಮಿತಿ ರಚನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ತನಿಖೆ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ ಸರ್ಕಾರವು ನಾಚಿಕೆಯಿಲ್ಲದೆ ಸಂಸತ್ತಿನಲ್ಲಿ ಹಸಿ ಸುಳ್ಳು ಹೇಳಿದೆ. ಏಪ್ರಿಲ್ 15ರಿಂದ ಮೇ 5ರವರೆಗೆ ಆಮ್ಲಜನಕದ ಕೊರತೆಯಿಂದಾಗಿ ಸಂಪೂರ್ಣ ಅವ್ಯವಸ್ಥೆ ಉಂಟಾಗಿತ್ತು. ಹೀಗಾಗಿ ರೋಗಿಗಳು ಮೃತಪಡುವಂತಾಯಿತು ಎಂದು ಆರೋಪಿಸಿ ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd