ಪ್ರಧಾನ ಮಂತ್ರಿ ನರೇಂದ್ರ ಮೋದಿ ಶೋ ಮ್ಯಾನ್ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟೀಕಿಸಿದ್ದಾರೆ. ಪಿ,ಎಂ, ಮೋದಿ ಇಂದು ಬೆಳಿಗ್ಗೆ 9 ಗಂಟೆ ದೇಶದ ಜನತೆಗೆ ವಿಡಿಯೋ ಸಂದೇಶ ನೀಡಿದ್ದರು. ಎಪ್ರಿಲ್ 5 ರಂದು ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಮನೆಯ ಲೈಟ್ ಬಂದ್ ಮಾಡಿ, ಬಳಿಕ ಮನೆಯಿಂದ ಹೊರ ಬಂದು ಅಥಾವ ಮನೆಯ ಬಾಲ್ಕನಿಯಲ್ಲಿ ನಿಂತು ಮೇಣದ ಬತ್ತಿ, ದೀಪ, ಮೊಬೈಲ್ ಲೈಟ್ ಬೆಳಗಿಸಿ ಎಂದು ಮೋದಿ ದೇಶದ ಜನರಿಗೆ ಕರೆ ನೀಡಿದ್ದರು. ಈ ವಿಡಿಯೋ ಪ್ರಸಾರವಾದ ಕೆಲವೇ ಹೊತ್ತಿನಲ್ಲಿ ಟ್ವೀಟ್ ಮಾಡಿರುವ ಶಶಿ ತರೂರ್ ಪ್ರಧಾನಿಯವರನ್ನು ಪ್ರಧಾನ್ ಶೋಮ್ಯಾನ್ ಎಂದು ಟೀಕಿಸಿದ್ದಾರೆ. ಅಲ್ಲದೆ ಲಾಕ್ ಡೌನ್ ಸಮಯದಲ್ಲಿ ಜನರು ನೋವು ಅನುಭವಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಸಂಕಷ್ಟದಿಂದ ಹೊರ ಬರುವುದು ಹೇಗೆ ಎಂದು ಮಾತನಾಡಿಲ್ಲ. ಲಾಕ್ ಡೌನ್ ಮುಗಿದ ಬಳಿಕ ದೇಶದ ಬಗ್ಗೆ ದೂರದೃಷ್ಟಿ ಮೋದಿ ಹೊಂದಿರಲಿಲ್ಲ. ಹಾಗಾಗಿ ಈ ವಿಡಿಯೋ ಭಾರತದ ಫೋಟೋ-ಆಪ್ ಪ್ರಧಾನ ಮಂತ್ರಿಯವರು ಸೃಷ್ಟಿಸಿದ ಉತ್ತಮ ಕ್ಷಣದಂತೆ ಕಂಡಿದೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ
ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ
ಚುನಾವಣೋತ್ತರ ಸಮೀಕ್ಷೆಗಳು ಕೇವಲ ಅಂಕಿಅಂಶಗಳ ಆಟವಾಗಿದ್ದು ಅವುಗಳ ಮೇಲೆ ನನಗೆ ಕಿಂಚಿತ್ತೂ ನಂಬಿಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ....








