PAK vs NZ 1st Test Match : ಪಾಂಟಿಂಗ್ , ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಿದ ಬಾಬರ್ ಆಜ಼ಂ..!!
ಪ್ರಸಕ್ತ ವರ್ಷದಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಪಾಕಿಸ್ತಾನದ ನಾಯಕ ಬಾಬರ್ ಆಜ಼ಂ, ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ತಮ್ಮ ಪರಾಕ್ರಮ ಮುಂದುವರಿಸಿದ್ದಾರೆ.
ಪ್ರವಾಸಿ ನ್ಯೂಜಿ಼ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಟೆಸ್ಟ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಆಜ಼ಂ, ಭರ್ಜರಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದರು.
ಇದು ಪಾಕಿಸ್ತಾನದ ನಾಯಕ 2022ರಲ್ಲಿ ಸಿಡಿಸಿದ 25ನೇ 50+ ಸ್ಕೋರ್ ಆಗಿದೆ. ಆ ಮೂಲಕ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಅವರುಗಳ ದಾಖಲೆ ಸರಿಗಟ್ಟಿದ್ದಾರೆ.
ಈ ಹಿಂದೆ ರಿಕಿ ಪಾಂಟಿಂಗ್ 2005ರಲ್ಲಿ ವರ್ಷವೊಂದರಲ್ಲಿ 24 50+ ಸ್ಕೋರ್ ದಾಖಲಿಸಿ ಮಿಂಚಿದ್ದರು. ಇವರ ನಂತರದಲ್ಲಿ ಮಿಸ್ಬಾ ಉಲ್ ಹಕ್(22) ಹಾಗೂ ವಿರಾಟ್ ಕೊಹ್ಲಿ(21) 50+ ಸ್ಕೋರ್ ದಾಖಲಿಸಿದ್ದರು.
ಟೀಂ ಇಂಡಿಯಾದ ರನ್ ಮಷಿನ್ ಕೊಹ್ಲಿ, ತಮ್ಮ ಕ್ರಿಕೆಟ್ ಜೀವನದಲ್ಲಿ 2017 ಹಾಗೂ 2019ರಲ್ಲಿ 21 ಬಾರಿ 50ಕ್ಕೂ ಅಧಿಕ ಸ್ಕೋರ್ಗಳಿಸಿದ್ದಾರೆ.
ಆದರೆ ಈ ಮೂವರು ದಿಗ್ಗಜ ಬ್ಯಾಟ್ಸ್ಮನ್ಗಳ ದಾಖಲೆ ಹಿಂದಿಕ್ಕಿರುವ ಬಾಬರ್ ಆಜ಼ಂ, 2022ನೇ ವರ್ಷದಲ್ಲಿ 25 ಬಾರಿ 50+ ಸ್ಕೋರ್ ಮಾಡಿ ದಾಖಲೆ ಬರೆದಿದ್ದಾರೆ.
ಅಲ್ಲದೇ ಪ್ರಸಕ್ತ ವರ್ಷದ ಅತ್ಯಂತ ಯಶಸ್ವಿ ಟೆಸ್ಟ್ ಬ್ಯಾಟ್ಸ್ಮನ್ ಎನಿಸಿರುವ ಬಾಬರ್ ಆಜ಼ಂ, 1170 ರನ್ಗಳಿಸಿದ್ದು, ಪ್ರಸಕ್ತ ವರ್ಷದಲ್ಲಿ ಮತ್ತೊಂದು ಇನ್ನಿಂಗ್ಸ್ ಆಡುವ ಅವಕಾಶ ಹೊಂದಿದ್ದಾರೆ.