Pakistan Blast: ಸಾವಿನ ಸಂಖ್ಯೆ 70ಕ್ಕೇ ಏರಿಕೆ – 150 ಮಂದಿ ಗೆ ಗಾಯ…
Pakistan Blast: ಪಾಕಿಸ್ತಾನದ ಪೇಶಾವರ ಮಸೀದಿ ಸ್ಪೋಟದಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರರು ಆತ್ಮಹತ್ಯೆ ದಾಳಿ ನಡೆಸಿದ ಪರಿಣಾಮ 60 ಮಂದಿ ಸಾವನ್ನಪ್ಪಿದ್ದು, 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಸಾಧ್ಯತೆಯಿರುವುದರಿಂದ ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಕಳೆದ ಹನ್ನೊಂದು ತಿಂಗಳಲ್ಲಿ ದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಗವರ್ನರ್ ಗುಲಾಂ ಅಲಿ ಹೇಳಿದ್ದಾರೆ. ಮಸೀದಿ ನಾಲ್ಕು ಹಂತದ ಭದ್ರತೆಯನ್ನ ಹೊಂದಿದೆ. ನಮಾಜ್ ಸಂದರ್ಭದಲ್ಲಿ ಪೊಲೀಸರು, ಸೇನೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕೂಡ ತಪಾಸಣೆ ನಡೆಸಿದರು. ಆದರೆ, ಆತ್ಮಹತ್ಯಾ ಬಾಂಬರ್ ನಾಲ್ಕು ಹಂತದ ಭದ್ರತೆಯನ್ನು ಬೈಪಾಸ್ ಮಾಡಿ ಮಸೀದಿಯೊಳಗೆ ಹೋಗಿ ಮುಂದಿನ ಸಾಲಿನಲ್ಲಿ ಕುಳಿತಿದ್ದಾಗ ತನ್ನನ್ನು ತಾನು ಸ್ಫೋಟಿಸಿಕೊಂಡ. ಸ್ಫೋಟದ ನಂತರ ಮಸೀದಿಯ ಒಂದು ಭಾಗ ಕುಸಿದುಬಿದ್ದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Pakistan Blast: Death toll rises to 70 – 150 injured…








