ಕರಾಚಿ ಬಸ್ ಅವಘಡ : 18 ಮಂದಿ ಸಜೀವ ದಹನ….
ಚಲಿಸುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು 8 ಮಕ್ಕಳು ಸೇರಿದಂತೆ 18 ಮಂದಿ ಸಜೀವ ದಹನವಾಗಿರುವ ಘಟನೆ ಪಾಕಿಸ್ತಾನದ ಜಮ್‌ಶೋರೊ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಎಲ್ಲಾ ಪ್ರಯಾಣಿಕರನ್ನ ಜಮ್ಶೋರೋ ಆಸ್ಪತ್ರೆಗೆ ಸೇರಿಸಲಾಗಿದೆ.
“ಬಸ್ ಕರಾಚಿಯಿಂದ ಖೈರ್‌ಪುರ್ ನಾಥನ್ ಶಾಗೆ ಹಿಂತಿರುಗುತ್ತಿದ್ದ ವೇಳೆ ನೂರಿಯಾಬಾದ್ ಬಳಿ ಬೆಂಕಿ ಕಾಣಿಸಿಕೊಂಡು 18 ಜನರು ಸಾವನ್ನಪ್ಪಿದ್ದಾರೆ” ಎಂದು ಜಮ್ಶೊರೊದ ಮಾಜಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಾವೇದ್ ಬಲೋಚ್ ತಿಳಿಸಿದ್ದಾರೆ.
https://twitter.com/i/status/1580364889406963713
ಸ್ಥಳಿಯ ಮಾಧ್ಯಮ ವರದಿಗಳ ಪ್ರಕಾರ, ಬಸ್ ನ ಹವಾ ನಿಯಂತ್ರಣ ವ್ಯವಸ್ಥೆ ( A C )ಯಲ್ಲಿ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಇಡೀ ಬಸ್ ಅನ್ನ ಆವರಿಸಿದ್ದು, ಬೆಂಕಿಯಿಂದ ಪಾರಾಗಲು ಕೆಲವು ಪ್ರಯಾಣಿಕರು ಬಸ್‌ನಿಂದ ಜಿಗಿದಿದ್ದಾರೆ. ಬಸ್ಸಿನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತ ಕುಟುಂಬಗಳಿಗೆ ಆಡಳಿತದಿಂದ ಎಲ್ಲ ನೆರವು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Pakistan Bus Fire Accident Video; 18 Flood Victims Burnt Alive








