ಬಾಬರ್- ರಿಜ್ವಾನ್ ವಿಶ್ವ ದಾಖಲೆ – T20 ಚೇಸಿಂಗ್ ನಲ್ಲಿ 203 ರನ್ ಜೊತೆಯಾಟ …
ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ T20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಚೇಸಿಂಗ್ ವೇಳೆ ದಾಖಲೆಯ ಜೊತೆಯಾಟಡಿದೆ ಈ ಜೋಡಿ.
117 ಎಸೆತಗಳಲ್ಲಿ 203 ರನ್ ಜೊತೆಯಾಟವಾಡಿದ ಬಾಬಾರ್ ಅಜಮ್ ಮತ್ತು ರಿಜ್ವಾನ್ ಜೋಡಿ 10 ವಿಕೆಟ್ ಗಳಿಂದ ಇಂಗ್ಲಂಡ್ ತಂಡವನ್ನ ಸೋಲಿಸಿದೆ. ಇದರೊಂದಿಗೆ ಪಾಕಿಸ್ತಾನ ಇಂಗ್ಲೆಂಡ್ ನಡುವಿನ 7 ಟಿ 20 ಪಂದ್ಯಗಳ ಸರಣಿ 1-1 ರಿಂದ ಸಮಬಲ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಇಂದು ಕರಾಚಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅತಿ ಹೆಚ್ಚು ಶತಕ ಬಾರಿಸಿದ ನಾಯಕ:
ಜೊತೆಯಾಟದ ಜೊತೆಗೆ ನಾಯಕನಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ವಿಷಯದಲ್ಲಿ ಬಾಬರ್ ಅಜಮ್ ಜಂಟಿಯಾಗಿ ನಂಬರ್-1 ಆಗಿದ್ದಾರೆ. ಎರಡನೇ ಟಿ20 ಶತಕ ಭಾರಿಸಿದ ಬಾಬರ್ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಸರಿಗಟ್ಟಿದ್ದಾರೆ.
ಪಾಕಿಸ್ತಾನಕ್ಕೆ ಬೃಹತ್ ಆರಂಭಿಕ ಜೊತೆಯಾಟ:
ಬಾಬರ್-ರಿಜ್ವಾನ್ 203 ರನ್‌ಗಳ ಅಜೇಯ ಜೊತೆಯಾಟ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ಅತಿ ದೊಡ್ಡ ಆರಂಭಿಕ ಜೊತೆಯಾಟವಾಗಿದೆ. ಇಬ್ಬರಿಬ್ಬರು ತಮ್ಮದೇ ದಾಖಲೆ ಮುರಿದಿದ್ದಾರೆ. ಇವರಿಬ್ಬರು 2021ರ ಏಪ್ರಿಲ್‌ನಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ವಿಕೆಟ್‌ಗೆ 197 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು. ಇಬ್ಬರೂ 5ನೇ ಬಾರಿಗೆ 150 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ.
ನಾಯಕನಾಗಿ ಬಾಬರ್ 10ನೇ ಶತಕ: ಪಾಕಿಸ್ತಾನದ ನಾಯಕನಾಗಿ ಬಾಬರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10ನೇ ಶತಕ ದಾಖಲಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 26ನೇ ಶತಕವಾಗಿತ್ತು. ಬಾಬರ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ದಾಖಲೆ ಮುರಿದಿದ್ದಾರೆ.