T20 World cup| 2023ರ ಏಕದಿನ ವರ್ಲ್ಡ್ ಕಪ್ ಬಾಯ್ ಕಟ್
ಟೀಂ ಇಂಡಿಯಾ – ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದು ತುಂಬಾ ವರ್ಷಗಳೇ ಕಳೆದಿವೆ.
ಉಗ್ರವಾದ, ರಾಜಕೀಯ ಕಾರಣಗಳಿಂದಾಗಿ ಉಭಯ ದೇಶಗಳ ನಡುವೆ ಒಳ್ಳೆಯ ಸಂಬಂಧಗಳಿಲ್ಲ.
ಅದಕ್ಕಾಗಿಯೇ ಐಸಿಸಿ ಮೇಜರ್ ಟೂರ್ನಿಗಳಲ್ಲಿ ಮಾತ್ರ ಟೀಂ ಇಂಡಿಯಾ, ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಬಾರಿ ಟಿ 20 ವಿಶ್ವಕಪ್ ಭಾಗವಾಗಿ ಇದೇ ಅಕ್ಟೋಬರ್ 23 ರಂದು ದಾಯಾದಿಗಳ ಕಾಳಗ ನಡೆಯಲಿದೆ.
ಮ್ಯಾಚ್ ವಿಷಯನ್ನ ಪಕ್ಕಕ್ಕೆ ಇಟ್ಟರೇ ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿ ನೀಡಿದ ಹೇಳಿಕೆಗಳು ಸದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪಾಕಿಸ್ಥಾನ ವೇದಿಕೆಯಾಗಿ ಮುಂದಿನ ಏಷ್ಯಾಕಪ್ ಟೂರ್ನಿ ನಡೆಯಲಿದ್ದು, ಟೀಂ ಇಂಡಿಯಾ ಭಾಗಿಯಾಗುವುದಿಲ್ಲ ಅಂತಾ ಹೇಳಿದ್ದಾರೆ.
ಜೈ ಶಾ ಅವರ ಈ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪಾಕಿಸ್ತಾನ ತಂಡದ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಆಡುವುದಕ್ಕೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಬರಲಿಲ್ಲವೆಂದರೇ ಅದೇ ವರ್ಷ ಭಾರತದಲ್ಲಿ ನಡೆಯಲಿರುವ 2023ರ ವರ್ಲ್ಡ್ ಕಪ್ ಅನ್ನು ನಾವು ಬಾಯ್ ಕಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಲ್ಲದೆ ಜೈ ಶಾ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ಗೆ ಭಾರತ ಆತಿಥ್ಯ ವಹಿಸುತ್ತಿರುವುದು ಗೊತ್ತಿರುವ ವಿಚಾರವೇ.
ಏಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು, ಒಂದು ದೇಶದ ಪರ ಮಾತನಾಡುವುದು ಸರಿಯಲ್ಲ ಅಂತಾ ಪಾಕ್ ಅಭಿಮಾನಿಗಳು ಗರಂ ಆಗುತ್ತಿದ್ದಾರೆ.
ಬಿಸಿಸಿಐ ತನ್ನ ಪ್ರಭಾವ ಬೀರಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ತುಳಿಯಲು ನೋಡುತ್ತಿದೆ ಎಂದು ಆರೋಪಿಸಿದ್ದಾರೆ.
ಏಕದಿನ ವರ್ಲ್ಡ್ ಕಪ್ ಬಾಯ್ ಕಟ್ ಮಾಡಿದ್ರೆ ಬಿಸಿಸಿಐ, ಐಸಿಸಿಗೆ ಭಾರಿ ನಷ್ಟವಾಗಲಿದೆ.
ಪಾಕಿಸ್ತಾನ ಕ್ರಿಕೆಟ್ ತಂಡ ಇಲ್ಲದೇ ಟೂರ್ನಿಯನ್ನು ಹೇಗೆ ನಡೆಸುತ್ತಾರೋ ನೋಡೋಣಾ ಅಂತಾ ಪಾಕ್ ಅಭಿಮಾನಿಗಳು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇನ್ನು ಪಾಕಿಸ್ತಾನ ತಂಡ ವರ್ಲ್ಡ್ ಕಪ್ ಅನ್ನು ಬಾಯ್ ಕಟ್ ಮಾಡಿದ್ರೆ ಬಿಸಿಸಿಐಗೆ ಯಾವುದೇ ನಷ್ಟವಾಗುದಿಲ್ಲ, ಇದರಿಂದ ಪಾಕ್ ತಂಡಕ್ಕೆ ನಷ್ಟವಾಗುತ್ತದೆ ಎಂದು ಕ್ರೀಡಾ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನ ತಂಡ ವಿಶ್ವಕಪ್ ಬಾಯ್ ಕಟ್ ಮಾಡಿದ್ರೆ ಐಸಿಸಿ ಪಾಕ್ ತಂಡವನ್ನು ಬ್ಲಾಕ್ ಲೀಸ್ಟ್ ಗೆ ಹಾಕುವ ಅವಕಾಶಗಳಿವೆ.
ಇದರಿಂದ ಪಾಕಿಸ್ತಾನ ಕ್ರಿಕೆಟ್ ಗೆ ನಷ್ಟವಾಗಲಿದೆ ಎಂದು ಕ್ರೀಡಾ ಪಂಡಿತರು ಹೇಳಿದ್ದಾರೆ.