ರಾಜಕೀಯ ಬಿಕ್ಕಟ್ಟು – ಯುಎಸ್ ಡಾಲರ್ ಎದುರು 188 ರುಪಾಯಿಗೆ ಕುಸಿದ ಪಾಕ್ ಕರೆನ್ಸಿ…

1 min read

ರಾಜಕೀಯ ಬಿಕ್ಕಟ್ಟು – ಯುಎಸ್ ಡಾಲರ್ ಎದುರು 188 ರುಪಾಯಿಗೆ ಕುಸಿದ ಪಾಕ್ ಕರೆನ್ಸಿ…

ರಾಜಕೀಯ ಮತ್ತು ಸಾಂವಿಧಾನಿಕ ಬಿಕ್ಕಟ್ಟಿನ ನಡುವೆ ಇಂಟರ್-ಬ್ಯಾಂಕ್ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಇಂದು ಸಾರ್ವಕಾಲಿಕ ಕನಿಷ್ಠ 188 ರೂಪಾಯಿಗಳಿಗೆ ಕುಸಿದಿದೆ.

ಏತನ್ಮಧ್ಯೆ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಶೆಹಬಾಜ್ ಷರೀಫ್ ಪ್ರಧಾನಿ ಇಮ್ರಾನ್ ಖಾನ್ ಮುರಿದ ಆರ್ಥಿಕತೆಯನ್ನ ಬಿಟ್ಟು, ಓಡಿಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕ ಚೌಧರಿ ಫವಾದ್ ಹುಸೇನ್, ಪಾಕಿಸ್ತಾನದ ಆರ್ಥಿಕತೆಯ ಮೇಲೆ ಸಾಂವಿಧಾನಿಕ ಬಿಕ್ಕಟ್ಟು ಪರಿಣಾಮ ಬೀರಿದೆ.  ರಾಜಕೀಯ ಅಸ್ಥಿರತೆ ದೀರ್ಘಕಾಲದವರೆಗೆ ಇದ್ದರೆ  ಮತ್ತಷ್ಟು ಹಾನಿಯಾಗುತ್ತದೆ ಎಂದು ಹೇಳಿದರು. ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಚುನಾವಣೆಯೊಂದೇ ಮುಂದಿರುವ ದಾರಿ ಎಂದು ಅವರು ಹೇಳಿದರು.

ಸ್ಥಳೀಯ ಮಾಧ್ಯಮದ ವರದಿಯ ಪ್ರಕಾರ, ಸಂಸತ್ತಿನ ವಿಸರ್ಜನೆಯ ನಂತರದ ರಾಜಕೀಯ ಅನಿಶ್ಚಿತತೆಯು ಪಾಕಿಸ್ತಾನದ ರೂಪಾಯಿಯನ್ನು ಕುಸಿತಕ್ಕೆ ತಳ್ಳುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd