ಪಾಕ್ ನಲ್ಲಿ ಚೀನಾಗೆ ಕತ್ತೆಗಳನ್ನ ರಫ್ತು ಮಾಡಲು ಹೆಚ್ಚು ಉತ್ತೇಜನ…!
ಪಾಕಿಸ್ತಾನ : ಪಾಕಿಸ್ತಾನ, ಕತ್ತೆಗಳು… ಈ ಎರೆಡೂ ಪದಗಳನ್ನ ಒಮ್ಮೆಲೆ ಕೇಳುದ್ರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ದೇಶದ ಆರ್ಥಿಕತೆ ಸುದಾರಿಸಲು ತಮ್ಮ ಕತ್ತೆಗಳನ್ನ ಹರಾಜಿಗಿಟ್ಟಿದ್ದ ಪ್ರಸಂಗ ನೆನಪಾಗುತ್ತೆ.. ಸದ್ಯ ಪಾಕಿಸ್ತಾನದಲ್ಲಿ ಕತ್ತೆಗಳ ಸಾಕಾಣಿಕೆಗೆ, ಅವುಗಳ ರಫ್ತಿಗೆ ಹೆಚ್ಚಾಗಿ ಉತ್ತೇಜನ ನೀಡಲಾಗ್ತಿದೆ. ಅದ್ರಲ್ಲೂ ಮಿತ್ರ ರಾಷ್ಟ್ರ ಕಪಟಿ ಚೀನಾಗೆ ರಫ್ತು ಮಾಡಲು ಹೆಚ್ಚಾಗಿ ಉತ್ತೇಜನ ನೀಡಲಾಗ್ತಿದೆ ಎನ್ನಲಾಗಿದೆ.
ಹೌದು ಈ ವರ್ಷ ಪಾಕ್ ನಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಕಳೆದ ಬಾರಿಗಿಂತ ಈ ವರ್ಷ ಕತ್ತೆಗಳ ಸಂಖ್ಯೆ 1 ಲಕ್ಷ ಹೆಚ್ಚಳವಾಗಿದೆ. ಸದ್ಯ ಪಾಕಿಸ್ತಾನದಲ್ಲಿ ಸುಮಾರು 56 ಲಕ್ಷ ಕತ್ತೆಗಳಿವೆ. ಪಾಕಿಸ್ತಾನದ ವಿತ್ತ ಸಚಿವ ಶೌಕತ್ ತಾರಿನ್ ಗುರುವಾರ 2020-21ರ ಆರ್ಥಿಕ ಸಮೀಕ್ಷೆ ಅಂಕಿ ಅಂಶಗಳನ್ನು ಪ್ರಕಟಿಸಿದರು. ಚೀನಾಗೆ ರಫ್ತು ಮಾಡಲು ಪಾಕಿಸ್ತಾನದಲ್ಲಿ ಕತ್ತೆ ಸಾಕಾಣಿಕೆಗೆ ಉತ್ತೇಜನ ನೀಡಲಾಗುತ್ತಿದೆ.
ಹಾಗಾಗಿ ಈ ವರ್ಷದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಶೌಕತ್ ಮಾಹಿತಿ ನೀಡಿದ್ದಾರೆ. ಚೀನಾದಲ್ಲಿ ಕತ್ತೆಗಳನ್ನ ಔಷಧಿಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಈ ಮೂಲಕ ಕತ್ತೆಗಳ ರಫ್ತು ಮೂಲಕ ಪಾಕ್ ಹೆಚ್ಚು ಆದಾಯವನ್ನ ತನ್ನದಾಗಿಸಿಕೊಳ್ಳುತ್ತಿದೆ.
ಕತ್ತೆಗಳ ಜೊತೆಯಲ್ಲಿ ಎಮ್ಮೆ, ಕುದುರೆ, ಆಡು, ಟಗರು ಮತ್ತು ಒಂಟೆಗಳ ಸಂಖ್ಯೆ ಏರಿಕೆಯತ್ತ ಸಾಗುತ್ತಿದೆ. ಪಾಕಿಸ್ತಾನ ಕಳೆದ ಕೆಲ ವರ್ಷಗಳಿಂದ ಚೀನಾಗೆ ಹೆಚ್ಚಿನ ಕತ್ತೆಗಳನ್ನು ನಿರ್ಯಾತ ಮಾಡಲಾರಂಭಿಸಿದೆ. ಕತ್ತೆಗಳ ಚರ್ಮದಿಂದ ಸಿದ್ಧವಾಗುವ ಔಷಧಿ ಇಮ್ಯೂನಿಟಿ ಸಿಸ್ಟಂನ್ನು ಸ್ಟ್ರಾಂಗ್ ಮಾಡುವಲ್ಲಿ ಕೆಲಸ ಮಾಡುತ್ತದೆ. ರಕ್ತ ಪ್ರಕ್ರಿಯೆಯನ್ನ ಬಲಪಡಿಸುತ್ತದೆ. ಸದ್ಯ ಪಾಕಿಸ್ತಾನ ಕತ್ತೆಗಳ ಸಂಖ್ಯೆಯಲ್ಲಿ 3ರನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.