ಪ್ಯಾರಾಲಿಂಪಿಕ್ಸ್ | ಕ್ಯಾನೋ ಸ್ಪ್ರಿಂಟ್ ನಲ್ಲಿ ಫೈನಲ್ ಗೆ ಪ್ರಾಚಿ
ಟೋಕಿಯೋ : ಪ್ಯಾರಾಲಿಂಪಿಕ್ಸ್ ನ ಕ್ಯಾನೋ ಸ್ಪ್ರಿಂಟ್ ನಲ್ಲಿ ಭಾರತದ ಪ್ರಾಚಿ ಯಾದವ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ನಡೆದ ಮಹಿಳೆಯರ 200 ಮೀಟರ್ ಕ್ಲಾಸ್ ವಿಎಲ್ 2 ಸಿಂಗಲ್ಸ್ ಕ್ಯಾನೋ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಪ್ರಾಚಿ ಮೂರನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದಾರೆ.
ಇಂದಿನ ಸ್ಪರ್ಧೆಯಲ್ಲಿ ಪ್ರಾಚಿ, 1 ನಿಮಿಷ 07.397 ಸೆಕೆಂಡುಗಳಲ್ಲಿ ಬೋಟ್ ಚಲಾಯಿಸುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.
ಇನ್ನು ಬ್ರಿಟನ್ ನ ಜಿನೆಟ್ ಚಿಪ್ಪಿಂಗ್ಟನ್ (1: 01.167) ಮೊದಲ ಸ್ಥಾನ ಪಡೆದರೇ ಕೆನಡಾದ ಬ್ರಿಯಾನ್ನಾ ಹೆನ್ನೆಸ್ಸಿ (1: 06.316) ಎರಡನೇ ಸ್ಥಾನ ಪಡೆದಿದ್ದಾರೆ.