ಮಾಸ್ಕ್  ಹಾಕಿ ಎಂದ ಕ್ಯಾಬ್  ಚಾಲಕನ  ಮೇಲೆ  ಕೆಮ್ಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ  ಮಹಿಳೆ : VIDEO VIRAL..!

1 min read

ಮಾಸ್ಕ್  ಹಾಕಿ ಎಂದ ಕ್ಯಾಬ್  ಚಾಲಕನ  ಮೇಲೆ  ಕೆಮ್ಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ  ಮಹಿಳೆ : VIDEO VIRAL..!

ಊಬರ್ ಕ್ಯಾಬ್ ಚಾಲಕ ಪ್ರಯಾಣಿಕರಿಗೆ ಮಾಸ್ಕ್ ಧರಿಸಿ ಎಂದದಕ್ಕೆ ಮೂವರು ಮಹಿಳೆಯರು ಅತ್ಯಂತ ದುರಹಂಕಾರದಲ್ಲಿ ವರ್ತಿಸಿರುವ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಮಹಿಳೆಯನ್ನ ಆಕೆಯ ಕಂಪನಿಯಿಂದ ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ. 

ವಿಡಿಯೋದಲ್ಲಿ ಕ್ಯಾಬ್ ನಲ್ಲಿ ಹಿಂಬದಿ ಸೀಟ್ ನಲ್ಲಿ ಮೂವರು ಮಹಿಳೆಯರು ಕುಳಿತಿದ್ದಾರೆ.  ಈ ವೇಳೆ ಮಹಿಳೆಯರಿಗೆ ಮಾಸ್ಕ್ ಧರಿಸುವಂತೆ ಕ್ಯಾಬ್ ಚಾಲಕ ಸುಧಾಕರ್ ಅವರು ತಿಳಿಸಿದ್ದಾರೆ. ಆದ್ರೆ ಆ ಮಹಿಳೆಯರು ಅತ್ಯಂತ ದುರಹಂಕಾರದಿಂದ ವರ್ತಿಸಿದ್ದಾರೆ. ಕ್ಯಾಬ್ ಚಾಲಕನ ವಿರುದ್ಧವೇ ಎರಗಿಬಿದ್ದಿದ್ದಾರೆ. ಇನ್ನೂ ಮಹಿಳೆಯೊಬ್ಬಳು ಕ್ಯಾಬ್ ಚಾಲಕನ ಮೇಲೆಯೇ ಕೆಮ್ಮಿದ್ದೂ ಅಲ್ಲದೇ ತುಂಬಾನೇ ಕೆಟ್ಟ ಬೈಗುಳಗಳಿಂದ ಚಾಲಕನನ್ನ ಬೈದಿದ್ಧಾರೆ. ಅವಾಚ್ಯ ಶಬ್ಧಗಳ ಬಳಕೆ ಮಾಡಿ ಬೈದು ಕ್ಯಾಬ್ ನಲ್ಲಿ ಕಿರುಚಾಡಿದ್ದಾರೆ. ಇದ್ರಿಂದಾಗಿ ಕ್ಯಾಬ್ ಚಾಲಕ ಬೇಸರಗೊಂಡಿರೋದನ್ನ ಕಾಣಬಹುದಾಗಿದೆ.

ಪತ್ರಕರ್ತೆ ಡಿಯೋನ್ ಲಿಮ್ ಈ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಮಹಿಳೆಯರ ನುರ್ನಡತೆ ವಿರುದ್ಧ ನೆಟ್ಟಿಗರ ಆಕ್ರೋಶ ಭುಗಿಲೆದ್ದಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಮಹಿಳೆ ಕೆಲಸ ಮಾಡುತ್ತಿದ್ದ ಕಂಪನಿಯಿಂದ ಆಕೆಯನ್ನ ಕೆಲಸದಿಂದ ತೆಗೆದು ಹಾಕಿರುವುದಾಗಿ ತಿಳಿದುಬಂದಿದೆ.

ಸ್ಪೈಡರ್ ಮ್ಯಾನ್  ಸ್ಪೀಡ್ ಅಲ್ಲಿ ಬೈಕ್ ರೈಡ್ ಮಾಡಿ ಅರೆಸ್ಟ್ ಆದ ಮಹಿಳೆ..! : Video Viral

ಚಲಿಸುತ್ತಿದ್ದ ರೈಲಿನಡಿ ಸಿಲುಕಿದ ಪ್ರಯಾಣಿಕನನ್ನ ಕಾಪಾಡಿದ ಭದ್ರತಾ ಸಿಬ್ಬಂದಿ : VIDEO VIRAL

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd