PBKS vs SRH | ಲೀವಿಂಗ್ ಸ್ಟೋನ್ ಅರ್ಧಶಕತ.. ಪಂಜಾಬ್ 151ಕ್ಕೆ ಆಲೌಟ್

1 min read
ravi-shastri-lauds-senior-indian-batter shikhar dhawan saaksha tv

ravi-shastri-lauds-senior-indian-batter shikhar dhawan saaksha tv

PBKS vs SRH | ಲೀವಿಂಗ್ ಸ್ಟೋನ್ ಅರ್ಧಶಕತ.. ಪಂಜಾಬ್ 151ಕ್ಕೆ ಆಲೌಟ್

ಇಂಡಿಯನ್ ಪ್ರಿಮಿಯರ್ ಲೀಗ್ ನ 28 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟ್ ಮಾಡಿ 151 ರನ್ ಗಳಿಗೆ ಆಲೌಟ್ ಆಗಿದೆ.

ಡಿ ವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ನಿಗದಿತ 20 ಓವರ್ ಗಳಲ್ಲಿ 151 ರನ್ ಗಳಿಸಿದೆ.

ಪಂಜಾಬ್ ಪರ ಶಿಖರ್ ಧವನ್ 8 ರನ್, ಪಿ ಸಿಂಗ್ 14 ರನ್. ಜಾನಿ ಬೈರ್ ಸ್ಟೋ 12 ರನ್, ಜಿತೇಶ್ ಶರ್ಮಾ 11ರನ್, ಶಾರೂಕ್ ಖಾನ್ 26 ರನ್, ಒಡಿಯನ್ ಸ್ಮಿತ್ 13 ರನ್ ಗಳಿಸಿದರು.

pbks-vs-srh-punjab kings innings highlights saaksha tv

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ದಿಟ್ಟ ಹೋರಾಟ ನಡೆಸಿದ ಲಿಯಾಮ್ ಲಿವಿಂಗ್ ಸ್ಟೋನ್ 33 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಿತ 60 ರನ್ ಸಿಡಿಸಿದರು.

ಹೈದರಾಬಾದ್ ತಂಡದ ಪರ  ಉಮ್ರಾನ್ ಮಲಿಕ್ 4 ವಿಕೆಟ್, ಭುವನೇಶ್ವರ್ 3 ವಿಕೆಟ್ ಪಡೆದು ಮಿಂಚಿದರು. ಟಿ ನಟರಾಜನ್, ಸುಚಿತ್ ತಲಾ ಒಂದು ವಿಕೆಟ್ ಪಡೆದರು.

ಇಂಚೂರಿ ಸಮಸ್ಯೆಯಿಂದಾಗಿ ಈ ಪಂದ್ಯದಿಂದ ಮಯಾಂಕ್ ಅಗರ್ ವಾಲ್ ದೂರ ಉಳಿದಿದ್ದಾರೆ. ಹೀಗಾಗಿ ಧವನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. pbks-vs-srh-punjab kings innings highlights

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd