ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ನಟನ ಬೆಂಬಲಕ್ಕೆ ನಿಂತ ಸಂತ್ರಸ್ತೆ ತಾಯಿ
ಹಿಂದಿ ಟಿವಿ ಜಗತ್ತಿನ ಚಿರಪರಿಚಿತ ನಟ ನಾಗಿನ್ ನಂತಹ ಖ್ಯಾತ ಧಾರವಾಹಿಗಳ ಮೂಲಕ ಜನರ ಫೇವರೇಟ್ ಆಗಿರುವ ನಟ ಪರ್ಲ್ ವಿ ಪುರಿ ವಿರುದ್ಧ ಇತ್ತೀಚೆಗೆ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ..
ಅಲ್ಲದೇ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ತಂದೆಯ ದೂರು ಆಧರಿಸಿ ಪರ್ಲ್ ವಿ ಪುರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಸೆಲಬ್ರಿಟಿಗಳು , ಪರ್ಲ್ ಗೆ ಕೆಲಸ ನೀಡಿದ್ದ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ , ಸಹ ನಟರು ಸೇರಿದಂತೆ ಬಹುತೇಕ ಕಲಾವಿಧರು ಪರ್ಲ್ ಪರ ನಿಂತಿದ್ದು, ಈ ಆರೋಪಗಳು ಶುದ್ಧ ಸುಳ್ಳು ಪರ್ಲ್ ಬಗ್ಗೆ ನಮಗೆ ಗೊತ್ತಿದೆ ಆತ ಆ ರೀತಿಯ ವ್ಯಕ್ತಿ ಅಲ್ಲ ಎಂದು ವಾದಿಸಿದ್ದಾರೆ.
ಈ ನಡುವೆ ಈ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತೆ ತಂದೆ ತಾಯಿಯ ದಾಂಪತ್ಯ ಕಲಹದಲ್ಲಿ ನಟ ಪರ್ಲ್ ಬಲಿಪಶುವಾಗಿದ್ದಾರೆನ್ನಲಾಗ್ತಿದೆ.. ಅಲ್ಲದೇ ಖುದ್ದು ಸಂತ್ರಸ್ತೆಯ ತಾಯಿ ಪರ್ಲ್ ಬೆಂಬಲಕ್ಕೆ ಬಂದಿದ್ಧಾರೆ. ಹೌದು.. ಸಂತ್ರಸ್ತೆ ತಾಯಿ ಏಕ್ತಾ ಶರ್ಮಾ ನಟ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಂತಿದ್ದಾರೆ. ಏಕ್ತಾ ಶರ್ಮಾ ಅವರ ಹತ್ತಿರದ ಸಂಬಂಧಿ ಆರತಿ ಪುರಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದು, ಏಕ್ತಾ ಶರ್ಮಾ ಮತ್ತು ಪತಿ ನಡುವೆ ಅನೇಕ ವರ್ಷಗಳಿಂದ ವೈಮನಸ್ಸು ಇದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಗಳನ್ನು ಸುಪರ್ದಿಗೆ ಪಡೆಯುವ ಉದ್ದೇಶದಿಂದ ಏಕ್ತಾ ಪತಿ ಹೀಗೆ ಮಾಡಿದ್ದಾರೆ ಎನ್ನುವ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ.
ಏಕ್ತಾ ಮತ್ತು ಪತಿ ‘ಕಳೆದ 10 ವರ್ಷಗಳಿಂದ ದಾಂಪತ್ಯ ಕಲಹ ಅನುಭವಿಸುತ್ತಿದ್ದರೆ. 2 ವರ್ಷಗಳಿಂದ ಮಗಳು ಏಕ್ತಾ ಜೊತೆ ಇಲ್ಲ. ಈ ವಿಚಾರದಲ್ಲಿ ಪರ್ಲ್ ವಿ ಪುರಿ, ಏಕ್ತಾಗೆ ಬೆಂಬಲಿಸಿದ್ದಾರೆ. ಶೀಘ್ರದಲ್ಲೇ ನ್ಯಾಯ ಹೊರಬರಲಿದೆ ಎಂದು ಭಾವಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
‘ಸಂತ್ರಸ್ತೆಯ ತಾಯಿ ಏಕ್ತಾ ಶರ್ಮಾ ಮಗಳನ್ನು ಸುಪರ್ದಿ ಪಡೆಯಲು ಹೋರಾಡುತ್ತಿದ್ದಾರೆ. ಹಾಗಾಗಿ ಪರ್ಲ್ ವಿ ಪುರಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ. ಏಕ್ತಾ ಈಗಾಗಲೇ ಕುಗ್ಗಿಹೋಗಿದ್ದಾಳೆ. ಬಹಿರಂಗವಾಗಿ ಹೋರಾಡಲು ನಿಮ್ಮ ಬೆಂಬಲ ಬೇಕು.’ ಎಂದು ಕೇಳಿಕೊಂಡಿದ್ದಾರೆ.
ಅಲ್ಲದೇ ‘ಪರ್ಲ್ ವಿ ಪುರಿಯ ಬೆಂಬಲಕ್ಕೆ ಏಕ್ತಾ ನಿಂತಿದ್ದಾರೆ. ಪರ್ಲ್ ವಿ ಪುರಿ ನಿರಪರಾಧಿ. ಅನಗತ್ಯವಾಗಿ ಪರ್ಲ್ ವಿ ಪುರಿ ಮೇಲೆ ಆರೋಪ ಮಾಡಲಾಗಿದೆ. ಏಕ್ತಾ ಪತಿ ಬರೆದ ಚೀಪ್ ಕಥೆಯಲ್ಲಿ ಇದು ಒಂದು. ಅಂತಿಮವಾಗಿ ನ್ಯಾಯ ಗೆಲ್ಲುತ್ತದೆ’ ಎಂದು ಬರೆದುಕೊಂಡಿದ್ದಾರೆ. ನಟಿ ಆರತಿ ಪುರಿ ಪೋಸ್ಟ್ ಅನ್ನು ಏಕ್ತಾ ಶರ್ಮಾ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ನಟ ಪರ್ಲ್ ವಿ ಪುರಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ 31 ವರ್ಷದ ನಟ ಪರ್ಲ್ ವಿ ಪುರಿ ವಿರುದ್ಧ ಸೆಕ್ಷನ್ 376 ಮತ್ತು 2012ರ ಪೋಕ್ಸೋ ಕಾಯ್ದೆಯಡೆ ಪ್ರಕರಣ ದಾಖಲಾಗಿದೆ.