ರೋಮ್, ಮೇ 16 : ಕೊರೋನಾ ವೈರಸ್ ಸೋಂಕಿನಿಂದ ಕಂಗೆಟ್ಟಿರುವ ಇಟಲಿಯಲ್ಲಿ ಜೂನ್ 3 ರಿಂದ ವಿದೇಶ ಪ್ರಯಾಣಕ್ಕೆ ಅನುಮತಿ ದೊರಕಿದೆ. ಇಟಲಿ ಸರ್ಕಾರ ವಿದೇಶದಿಂದ ಬರುವವರಿಗೆ ಮತ್ತು ವಿದೇಶಕ್ಕೆ ಪ್ರಯಾಣಿಸುವವರಿಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಬಹುತೇಕ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿರುವ ಇಟಲಿ ಸರ್ಕಾರ ದೇಶಾದ್ಯಂತ ಜೂನ್ 3ರಿಂದ ಸಾರ್ವಜನಿಕ ಸಂಚಾರಕ್ಕೆ ಅನುಮತಿ ನೀಡಿದೆ. ಇಟಲಿ ಪ್ರಧಾನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎರಡನೇ ಹಂತದ ಕೊರೊನಾ ಸೋಂಕು ತಡೆಗೆ ಸಾರ್ವಜನಿಕರು ಜಾಗರೂಕತೆ ವಹಿಸುವುದರೊಂದಿಗೆ ಸಾಮಾನ್ಯ ಸ್ಥಿತಿಗೆ ಮರಳಬೇಕಾಗಿದೆ ಎಂದು ಹೇಳಿದ್ದಾರೆ. ಇಟಲಿಯಲ್ಲಿ ಇಲ್ಲಿಯವರೆಗೆ 2,23,885 ಮಂದಿ ಕೊರೊನಾ ಸೋಂಕಿತರಿದ್ದು, 31,610 ಮಂದಿ ಸಾವನ್ನಪ್ಪಿದ್ದಾರೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಪಟ್ಟಿಯಲ್ಲಿ ಇಟಲಿ ಮೂರನೇ ಸ್ಥಾನದಲ್ಲಿ ಇದ್ದರೆ, ಮೊದಲೆರಡು ಸ್ಥಾನದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ ಇದೆ. ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ ನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು, ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಲಾಕ್ ಡೌನ್ ಸಡಿಲಿಕೆ ಮಾಡಿತ್ತು. ಇದೀಗ ಮೇ 18ರಿಂದ ಅಂಗಡಿ, ವ್ಯಾಪಾರ ವಹಿವಾಟುಗಳು ಪುನಾರಾರಂಭಗೊಳ್ಳಲಿದ್ದು, ವಿದೇಶ ಪ್ರಯಾಣಕ್ಕೆ ಜೂನ್ 3ರಿಂದ ಅನುಮತಿ ದೊರಕಲಿದೆ. ಹೊಟೇಲ್, ರೆಸ್ಟೋರೆಂಟ್ ಹಾಗೂ ಅಂಗಡಿಗಳಲ್ಲಿ ಆರೋಗ್ಯ ಅಧಿಕಾರಿಗಳ ಶಿಫಾರಸ್ಸಿನ ಅನ್ವಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೊಂದಿಗೆ ಸ್ವಚ್ಛತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
Film – ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಪ್ರಚಾರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ: ಹಾಲಿವುಡ್ನಲ್ಲಿ ಮಿಂಚಿದ ಕನ್ನಡಿಗ
ಮಂಗಳೂರಿನ ಕೆರಾಡಿಯಿಂದ ಬಂದ ‘ಕಾಂತಾರ’ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಜಾಗತಿಕ ಮಟ್ಟದ ಅತಿದೊಡ್ಡ ಸೂಪರ್ ಹೀರೋ ಫ್ರಾಂಚೈಸಿ ‘ಸ್ಪೈಡರ್ ಮ್ಯಾನ್’ ಪ್ರಪಂಚಕ್ಕೆ ಕಾಲಿಡುವ...








