ಸತತ 6ನೇ ದಿನ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಕೆ…
ನಾಲ್ಕುವರೆ ತಿಂಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನ ಏರಿಸಲಾಗುತ್ತಿದೆ. ಸೋಮವಾರ, ಮಾರ್ಚ್ 28, 2022ಕ್ಕೆ ಸತತ 6 ದಿನ ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬೆಲೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 30 ಪೈಸೆ ಹೆಚ್ಚಿಸಲಾಗಿದೆ ಮತ್ತು ಡೀಸೆಲ್ 35 ಪೈಸೆಗಳಷ್ಟು ಹೆಚ್ಚಾಗಿದೆ.
ಇತ್ತೀಚಿನ ಬೆಲೆ ಪರಿಷ್ಕರಣೆ ನಂತರ, ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 99.41 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ರೂ.90.77 ಕ್ಕೆ ಮಾರಾಟವಾಗುತ್ತಿದೆ. ಆರ್ಥಿಕ ರಾಜಧಾನಿ ಮುಂಬೈನಲ್ಲಿ, ಪೆಟ್ರೋಲ್ ಬೆಲೆ 114.19 ರೂ. ಡೀಸೆಲ್ ಬೆಲೆ ರೂ 98.50 ರೂ ಇದೆ. ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡೇಟಾ ತೋರಿಸಿದೆ. ಮಾರ್ಚ್ 22, 2022 ರಂದು ದಾಖಲೆಯ 137 ದಿನಗಳ ಅಂತರದ ನಂತರ ದೈನಂದಿನ ಬೆಲೆ ಪರಿಷ್ಕರಣೆಗಳು ಪುನರಾರಂಭಗೊಂಡ ನಂತರ ಏಳು ದಿನಗಳ ಅವಧಿಯಲ್ಲಿ 6 ಬಾರಿ ಏರಿಕೆಯಾಗಿದೆ.
ಕಳೆದ ವರ್ಷ ನವೆಂಬರ್ 4 ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಐದು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಯವರೆಗೆ ಇಂಧನಗಳ ಬೆಲೆ ಬದಲಾಗದೆ ಸ್ಥಿರವಾಗಿತ್ತು. ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿತ್ತು.
ನಗರದಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗಳು ಇಂತಿವೆ.
ಸಿಟಿ ಪೆಟ್ರೋಲ್ (ರೂ/ಲೀಟರ್) ಡೀಸೆಲ್ (ರೂ/ಲೀಟರ್)
ನವದೆಹಲಿ 99.41 90.77
ಮುಂಬೈ 114.19 98.50
ಕೋಲ್ಕತ್ತಾ 108.85 93.92
ಚೆನ್ನೈ 105.18 95.33
ಬೆಂಗಳೂರು 104.78 89.02
ಹೈದರಾಬಾದ್ 112.71 99.07
ಪಾಟ್ನಾ 110.03 95.18
ಭೋಪಾಲ್ 111.59 95.09
ಜೈಪುರ 111.44 94.89
ಲಕ್ನೋ 99.26 90.92
ತಿರುವನಂತಪುರಂ 110.65 97.74