ನವದೆಹಲಿ : ದೇಶದಲ್ಲಿ ತೈಲ ಬೆಲೆಯೂ ಕೊರೊನಾ ಸೋಂಕಿತರ ಸಂಖ್ಯೆಯಂತೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ದೇಶದಲ್ಲಿ ಕಳೆದ 19 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ನಿರಂತರ ಏರಿಕೆ ಕಾಣುತ್ತಿದ್ದು, ಇಂದು ಕೂಡ ಇಂಧನ ಬೆಲೆ ಹೆಚ್ಚಳವಾಗಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್ ಗೆ 16 ಪೈಸೆ ಹಾಗೂ ಡೀಸೆಲ್ ಗೆ 14 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಗೆ 79.92 ರೂ. ಇದ್ದರೆ, ಡೀಸೆಲ್ 80.02 ರೂ. ಇದೆ. ಹೀಗಾಗಿ ದೆಹಲಿಯಲ್ಲಿ ಎರಡನೇ ದಿನವೂ ಪೆಟ್ರೋಲ್ ಗಿಂತ ಡೀಸೆಲ್ ದರವೇ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 82.35 ರೂ. ಹಾಗೂ ಡೀಸೆಲ್ ಬೆಲೆ 75.96 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ 86.54 ರೂ. ಹಾಗೂ ಡೀಸೆಲ್ 77.76 ರೂ.ಗೆ ಮಾರಾಟವಾಗುತ್ತಿದೆ.
ದಿನೇ ದಿನೆ ಏರಿಕೆ ಕಾಣುತ್ತಿರುವ ಬೆಲೆಯಿಂದಾಗಿ ಗ್ರಾಹಕ ತಲೆ ಬಿಸಿ ಮಾಡಿಕೊಂಡಿದ್ದಾನೆ. ಮೊದಲೇ ಕೊರೊನಾ ಕಾಟದಿಂದ ಕೆಲಸ ಇಲ್ಲದಂತಾಗಿದ್ದು, ವ್ಯಾಪಾರ ವಹಿವಾಟು ಕ್ಷೀಣಿಸಿದೆ. ದುಡ್ಡಿಲ್ಲದ ಈ ಹೊತ್ತಿನಲ್ಲಿ ಡೀಸೆಲ್-ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗುತ್ತಿರೋದು ಜನರ ಚಿಂತೆಗೆ ಕಾರಣವಾಗಿದೆ.