ಸತತ ಮೂರನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ Petrol and diesel saaksha tv
ನವದೆಹಲಿ : ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ.
ದೇಶದಲ್ಲಿ ಸತತ ಮೂರನೇ ದಿನವೂ ಕೂಡ ಇಂಧನದ ಬೆಲೆ ಏರಿಕೆಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಕ್ರಮವಾಗಿ ಪ್ರತಿ ಲೀಟರ್ಗೆ 25 ಪೈಸೆ ಮತ್ತು 30 ಪೈಸೆ ಹೆಚ್ಚಿಸಲಾಗಿದೆ.
ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವು ಮತ್ತೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.
ದೆಹಲಿಯಲ್ಲಿ ಪ್ರತಿ ಒಂದು ಲೀಟರ್ ಪೆಟ್ರೋಲ್ ಗೆ 102.14 ರೂ. ಹಾಗೂ ಡೀಸೆಲ್ ಬೆಲೆಯನ್ನು 90.47 ರೂ.ಗಳಿಗೆ ಹೆಚ್ಚಿಸಲಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಗೆ 108.19 ಹಾಗೂ ಡೀಸೆಲ್ ದರ 98.16 ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.65 ರೂ. ಹಾಗೂ ಡೀಸೆಲ್ ಬೆಲೆ 95.98 ರೂಪಾಯಿಗೆ ಹೆಚ್ಚಿಸಲಾಗಿದೆ.