ಎಗ್ಗಿಲ್ಲದೆ ಹೆಚ್ಚಳವಾಗುತ್ತಿದೆ ತೈಲ ಬೆಲೆ : ಇವತ್ತು 35 ಪೈಸೆ ಏರಿಕೆ petrol-diesel saaksha tv
ನವದೆಹಲಿ : ದೇಶದಲ್ಲಿ ತೈಲ ಬೆಲೆ ಲಂಗುಲಗಾಮು ಇಲ್ಲದಂತೆ ಪ್ರತಿದಿನ ಏರಿಕೆಯಾಗುತ್ತಲೇ ಇದೆ.
ಹುಚ್ಚು ಕುದುರೆಯಂತೆ ತೈಲ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿದ್ದರೇ ಗತಿ ಇಲ್ಲದೇ ಜನರು ಕಷ್ಟದಲ್ಲಿ ಬದುಕುತ್ತಿದ್ದಾರೆ.
ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದ್ದು, ಇಂದೂ ಕೂಡ ಪೆಟ್ರೋಲಿಯಂ ಕಂಪನಿಗಳು ಬೆಲೆ ಏರಿಕೆ ಮಾಡಿವೆ.
ಇವತ್ತು ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 35 ಪೈಸೆ ಹೆಚ್ಚಿಸಿವೆ.
ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 106.89 ರೂಪಾಯಿ ಹಾಗೂ ಡೀಸೆಲ್? ದರ 95.62 ರೂಪಾಯಿ ಇದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 112.78 ಕ್ಕೆ ಹಾಗೂ ಲೀಟರ್ ಡೀಸೆಲ್ 103.63 ರೂ. ಗೆ ಮಾರಾಟವಾಗುತ್ತಿದೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.61 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 101.49 ರೂ. ಗೆ ಏರಿಕೆಯಾಗಿದೆ.