ದೇಶ್ ವಾಸಿಯೋ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ
ನವದೆಹಲಿ : ಕೊರೊನಾ ಸಂಕಷ್ಟದ ಮಧ್ಯೆ ಇಂದೂ ಕೂಡ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ.
ಸರ್ಕಾರಿ ತೈಲ ಕಂಪನಿಗಳು ಇಂದು ದರ ಪರಿಷ್ಕರಣೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 28 ರಿಂದ 29 ಪೈಸೆಯಷ್ಟು ಹೆಚ್ಚಳ ಮಾಡಿದ್ದು, ಡೀಸೆಲ್ ಬೆಲೆಯನ್ನು 24 ರಿಂದ 28 ಪೈಸೆಯಷ್ಟು ಏರಿಕೆ ಮಾಡಲಾಗಿದೆ.
ಇದರೊಂದಿಗೆ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 100.47 ರೂ ಇದೆ. ಡೀಸೆಲ್ ದರ 92.45 ರೂ. ಇದೆ.
ದೆಹಲಿಯಲ್ಲಿ ಪೆಟ್ರೋಲ್ ದರ 94.23 ರೂ., ಡೀಸೆಲ್ ದರ 85.15 ರೂ ಇದೆ.
ಕೊಲ್ಕತ್ತಾದಲ್ಲಿ ಡೀಸೆಲ್ ದರ 88 ರೂ., ಪೆಟ್ರೋಲ್ ದರ 94.25 ರೂ. ಇದೆ.
ಚೆನ್ನೈನಲ್ಲಿ ಡೀಸೆಲ್ ದರ 89.99 ರೂ., ಪೆಟ್ರೋಲ್ ದರ 95.76 ರೂ. ಇದೆ.
ಕೊರೊನಾ ಹೆಚ್ಚಳ ಹಿನ್ನೆಲೆ ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಇದರಿಂದ ವಾಹನಗಳ ಬಳಕೆ ಕಡಿಮೆಯಾಗಿದೆ. ಹೀಗಿದ್ದರೂ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಯಾಕೆ ಪದೇ ಪದೆ ಏರಿಕೆಯಾಗುತ್ತಿದೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.