ADVERTISEMENT
Saturday, April 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೋದಿ ವಿಶ್ವಮಾನ್ಯ ನಾಯಕ ಮೆಚ್ಚುಗೆ ಕಾಯಕ್ರಮಮತೆಗೆ ಸಂದ ಗೌರವ: ನಳಿನ್ ಕುಮಾರ್ ಅಭಿನಂದನೆ

Kariyappa N by Kariyappa N
January 3, 2021
in Newsbeat, Politics, Samagra karnataka, ರಾಜ್ಯ
modi
Share on FacebookShare on TwitterShare on WhatsappShare on Telegram

ಬೆಂಗಳೂರು: ಕೋವಿಡ್-19 ನಿರ್ವಹಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರು ವಿಶ್ವದಲ್ಲೇ ಅತ್ಯುತ್ತಮ ಸಾಧನೆ ಮಾಡಿದವರು ಎಂಬ ಸ್ಥಾನ ಪಡೆದಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆ “ಮಾನಿರ್ಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಅವರು ವಿಶ್ವಮಾನ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

kaleel
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮೋದಿ ಅವರಿಗೆ ಶೇ.74 ಜನಮತ ಲಭಿಸಿದ್ದರೆ, ನಂತರದ ಸ್ಥಾನ ಪಡೆದ ಬ್ರೆಜಿಲ್ ಪ್ರಧಾನಿ ಜೈರ್ ಬೊಲ್ಸೊನಾರೊ ಅವರು ಶೇ.46, ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇ 41, ಬ್ರಿಟನ್ ಪ್ರಧಾನಿಗಳಾದ ಶ್ರೀ ಬೊರಿಸ್ ಜಾನ್ಸನ್ ಅವರು ಶೇ 39 ಜನಮತ ಗಳಿಸಿದ್ದಾರೆ. ಇದು ನಮ್ಮ ಪ್ರಧಾನಿಯವರ ಅಪಾರ ಜನಪ್ರಿಯತೆ ಮತ್ತು ಕರ್ತವ್ಯಪರತೆಗೆ ಸಂದ ಮನ್ನಣೆಯಾಗಿದೆ ಎಂದು ತಿಳಿಸಿದರು.

Related posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

April 24, 2026
150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

April 24, 2026

narendra modiಸ್ಟಿಟ್ಸರ್‍ಲ್ಯಾಂಡ್‍ನ ಗ್ಯಾಲಪ್ ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಕೊರೊನಾ ಸಂಬಂಧ ಕಳೆದ ಏಪ್ರಿಲ್‍ನಲ್ಲಿ ನಡೆಸಿದ ಸಮೀಕ್ಷೆಯಲ್ಲೂ ಮೋದಿ ಅವರ ಜನಪ್ರಿಯತೆ ಸಾಬೀತಾಗಿತ್ತು. ಶೇ.91 ಭಾರತೀಯರು ಪ್ರಧಾನಿಗಳ ಅದ್ಭುತ ಕಾರ್ಯವೈಖರಿ ಕುರಿತು ಮೆಚ್ಚುಗೆ ಸೂಚಿಸಿದ್ದರು ಎಂದು ವಿವರಿಸಿದರು.
ಇಯಾನ್ಸ್-ಸಿ ವೋಟರ್ ಕೋವಿಡ್-19 ಟ್ರಾಕರ್-2020ರ ಸೆಪ್ಟೆಂಬರ್ 12ರಂದು ನಡೆಸಿದ ಸಮೀಕ್ಷೆಯಲ್ಲಿ ಶೇ.75.8 ಜನರು ಮೋದಿ ಅವರ ಕಾರ್ಯತಂತ್ರಕ್ಕೆ ಮೆಚ್ಚುಗೆ ಸೂಚಿಸಿ ಅವರನ್ನು ಬೆಂಬಲಿಸಿದ್ದರು. 2019ರ ಮೇ 1ರಂದು ನಡೆದ “ಗ್ಯಾಲಪ್” ಸರ್ವೆಯಲ್ಲೂ 2014ರ ಬಳಿಕ ಮೋದಿ ಸರಕಾರವು ಕೈಗೊಂಡ ಕ್ರಮಗಳಿಂದ ಭಾರತವು ಸುರಕ್ಷಿತ ದೇಶವಾಗಿ ಹೊರಹೊಮ್ಮಿದೆ ಎಂಬ ಮಾತನ್ನು ಶೇ.70 ಜನರು ಹೇಳಿದ್ದರು. ರಾತ್ರಿ ವೇಳೆ ನಗರದಲ್ಲಿ ಓಡಾಡುವಷ್ಟು ದೇಶವು ಸುರಕ್ಷಿತವಾಗಿದೆ ಎಂಬ ಧನಾತ್ಮಕ ಮಾತನ್ನು ಆಡಿರುವುದು ಗಮನಾರ್ಹ ಎಂದರು.

ಅಮೆರಿಕದ ಅಧ್ಯಕ್ಷರು ನೀಡುವ ಮಹತ್ವದ ಪ್ರಶಸ್ತಿ ಲೀಜನ್ ಆಫ್ ಮೆರಿಟ್ , ಅಮೆರಿಕದ ಗೇಟ್ಸ್ ಪ್ರತಿಷ್ಠಾನವು ಕೊಡಮಾಡುವ ಗ್ಲೋಬರ್ ಗೋಲ್‍ಕೀಪರ್ ಪ್ರಶಸ್ತಿ, ಬಹ್ರೇನ್‍ನ ರಾಜ ಹಾಮದ್ ಬಿನ್ ಇಸ್ಸಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ಬಹ್ರೇನ್‍ನ ಶ್ರೇಷ್ಠ ಪ್ರಶಸ್ತಿ ದಿ ಕಿಂಗ್ ಹಾಮದ್ ಆರ್ಡರ್ ಆಫ್ ದಿ ರಿನೈಸೆನ್ಸ್ ಅವಾರ್ಡ್, ಮಾಲ್ದಿವ್ಸ್ ನಲ್ಲಿ “ನಿಶಾನ್ ಇಜುದ್ದೀನ್” ಪುರಸ್ಕಾರ, ರಷ್ಯಾದ ಅತ್ಯುಚ್ಛ ಪ್ರಶಸ್ತಿ ಎನಿಸಿದ ಆರ್ಡರ್ ಆಫ್ ಸೈಂಟ್ ಆಂ ಆಂಡ್ರ್ಯೂಸ್ ದಿ ಅಪೆÇೀಸ್ಟಲ್ ಅವಾರ್ಡ್, ಅರಬ್ ಒಕ್ಕೂಟಗಳ (ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಜಯೀದ್ ಅವಾರ್ಡ್, ಸಿಯೋಲ್ ಪೀಸ್ ಪ್ರೈಜ್ ಆಪ್ 2018, 2019ರಲ್ಲಿ ಅಮೆರಿಕದಿಂದ ಫಿಲಿಪ್ ಕೋಲ್ಟೆರ್ ಅವಾರ್ಡ್, 2018ರಲ್ಲಿ ವಿಶ್ವಸಂಸ್ಥೆಯಿಂದ ಯುಎನ್‍ಇಪಿ ಚಾಂಪಿಯನ್ಸ್ ಆಫ್ ಅರ್ತ್, ಪ್ಯಾಲೆಸ್ಟೈನ್ ದೇಶದಿಂದ 2018ರಲ್ಲಿ ಗ್ರಾಂಡ್ ಕಾಲರ್ ಅವಾರ್ಡ್, 2016ರಲ್ಲಿ ಅಫಘಾನಿಸ್ತಾನ ದೇಶದಿಂದ ಅಮಿರ್ ಅಮಾನುಲ್ಲಾ ಖಾನ್ ಅವಾರ್ಡ್, 2016ರಲ್ಲಿ ಸೌದಿ ಅರೇಬಿಯಾದಿಂದ ಕಿಂಗ್ ಅಬ್ದುಲ್ ಅಜೀಜ್ (ಸ್ಪೆಷಲ್ ಕ್ಲಾಸ್) ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ ಎಂದು ತಿಳಿಸಿದರು.
ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಮಧ್ಯವರ್ತಿಗಳ ಹೋರಾಟ ನಡೆಯುತ್ತಿದೆ. ಗ್ರಾಮ ಪಂಚಾಯತ್‍ಗಳಲ್ಲಿ ಪಕ್ಷವು ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯವೇ ಕಾರಣ. ಪಕ್ಷವು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಅತ್ಯುತ್ತಮ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸ್‍ಡಿಪಿಐ ಕಾರ್ಯಕರ್ತರು ಬೇರೆ ರಾಷ್ಟ್ರಗಳ ಪರವಾಗಿ ಘೋಷಣೆ ಕೂಗಿರುವುದು ಹಾಗೂ ಪಿಎಫ್‍ಐ ದೇಶದ್ರೋಹಿ ಚಟುವಟಿಕೆಗಳನ್ನು ಖಂಡಿಸಿದ ನಳಿನ್ ಕುಮಾರ್, ಈ ಪಕ್ಷಗಳನ್ನು ನಿಷೇಧಿಸುವ ಸಂಬಂಧ ರಾಜ್ಯ ಸರಕಾರವು ಚುನಾವಣಾ ಆಯೋಗದ ಗಮನ ಸೆಳೆಯಲಿದೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: BJP PresidentNalin Kumar Kateeloutstanding performancePrime Minister Narendra Modi
ShareTweetSendShare
Join us on:

Related Posts

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

23 ಕೋಟಿ ಬೆಲೆಯ ಸರ್ಕಾರಿ ಜಾಗ ಕಾಂಗ್ರೆಸ್ ಪಾಲಾಯ್ತೇ? ಕೇವಲ 17 ಲಕ್ಷಕ್ಕೆ ಭೂಮಿ ಮಂಜೂರು ಮಾಡಿದ್ದಕ್ಕೆ ಹೈಕೋರ್ಟ್ ಗರಂ

by Shwetha
April 24, 2026
0

ತುಮಕೂರು ನಗರದ ಆಯಕಟ್ಟಿನ ಜಾಗದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ ಗೆ ಅತಿ ಕಡಿಮೆ ಬೆಲೆಗೆ ನೀಡಲಾಗಿದೆ ಎಂಬ ಗಂಭೀರ ಆರೋಪದ...

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

150 ಕೋಟಿ ಭಾರತೀಯರ ರಕ್ತದಲ್ಲೂ ಪ್ಲಾಸ್ಟಿಕ್ ಅಂಶ ಪತ್ತೆ ನಿಮ್ಮ ಜೀವ ಉಳಿಸಿಕೊಳ್ಳಲು ಈ 10 ಸೂತ್ರಗಳನ್ನು ಇಂದೇ ಪಾಲಿಸಿ

by Shwetha
April 24, 2026
0

ಭಾರತ ಇಂದು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ಆದರೆ ಇದೇ 150 ಕೋಟಿ ಜನಸಂಖ್ಯೆಯ ಮೇಲೆ ಇಂದು ಮೈಕ್ರೋಪ್ಲಾಸ್ಟಿಕ್ ಎಂಬ ಸದ್ದಿಲ್ಲದ ಕೊಲೆಗಾರ ದಾಳಿ...

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

ಇಂಡಿಯಾ ಒಕ್ಕೂಟದ ನಡೆಯಿಂದ ದಕ್ಷಿಣ ಭಾರತಕ್ಕೆ ಭಾರಿ ಅನ್ಯಾಯ: ಸಂಸದರ ಸ್ಥಾನ ಕುಸಿಯುವ ಆತಂಕ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್

by Shwetha
April 24, 2026
0

ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರದ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ತೆಗೆದುಕೊಂಡ ನಿರ್ಧಾರದಿಂದಾಗಿ ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದ ಹಿನ್ನಡೆ ಅನುಭವಿಸುವಂತಾಗಿದೆ...

ಮುಸ್ಲಿಮರು ಮತ್ತು ನಾವು ಯಾವತ್ತೂ ಸಹೋದರರು: ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ಯಾವಾಗಲೂ ಇದೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

ಈಗ ತಮಾಷೆಯನ್ನೂ ಮಾಡುವಂತಿಲ್ಲ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ತೀವ್ರ ಅಸಮಾಧಾನ

by Shwetha
April 24, 2026
0

ಬೆಂಗಳೂರು: ಕಬಡ್ಡಿ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ ಕುರಿತು ನೀಡಿದ್ದ ಹೇಳಿಕೆ ಈಗ ಕಾನೂನು ಸಂಕಷ್ಟಕ್ಕೆ ತಿರುಗಿದ್ದು, ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು...

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

SSLC RESULT – ಟ್ವೀಟ್ ಎಲ್ಲಿ ಮಹಾಜ್ಞಾನಿ ಕಲಬುರಗಿ ಕೊನೆಯ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ಕಾಲೆಳೆದ ಬಿಜೆಪಿ

by Shwetha
April 24, 2026
0

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಹೊಸ ಸಮರ ಶುರುವಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram