PM Modi In Hubli : ಈ ಶತಮಾನ ಭಾರತದ ಶತಮಾನ – ಮೋದಿ
ಹುಬ್ಬಳ್ಳಿ : 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಭವ್ಯ ಸ್ವಾಗತ ಸಿಕ್ಕಿದೆ.. ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ 5 ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ..
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೇ ನಿಲ್ದಾಣದ ವರೆಗೂ ರೋಡ್ ಶೋ ಮೂಲಕ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಕಣ್ತುಂಬಿಕೊಂಡ ಜನ ಜೈ ಮೋದಿ ಎಂದು ಘೋಷಣೆ ಕೂಗಿದ್ದಾರೆ..
ಈ ವೇಳೆ ಈ ಶತಮಾನ ಭಾರತದ ಶತಮಾನ ಎಂದು ಇಡೀ ವಿಶ್ವವೇ ಹೇಳುತ್ತಿದೆ. ಈ ಕಾರಣಕ್ಕೆ ರನ್ ವೇ ಸಿದ್ದವಾಗಿದೆ. ಹೊಸ ಹೊಸ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವ ಜನತೆಗೆ ಕರೆ ನೀಡಿದ್ದಾರೆ.
ಇದೇ ವೇಳೆ
ಹೊಸ ಸಂಕಲ್ಪದತ್ತ ಭಾರತ ಮುನ್ನಡೆಯುತ್ತಿದೆ. ಯುವ ಶಕ್ತಿಯಿಂದ ರಾಷ್ಟ್ರ ನಿರ್ಮಾಣ ಆಗುತ್ತದೆ ಎಂದು ವಿವೇಕಾನಂದರು ಹೇಳಿದ್ದಾರೆ. ಇಡೀ ವಿಶ್ವವೇ ಭಾರತವನ್ನು ಈಗ ನೋಡುತ್ತಿದೆ. ನಮ್ಮದು ಯುವ ದೇಶವಾಗಿದ್ದು ಮುಂದಿನ 25 ವರ್ಷದಲ್ಲಿ ಭಾರತವನ್ನು ಕಟ್ಟಬೇಕು. ವಿಶ್ವದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ನಿಮ್ಮ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ವಿವಿಧ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್ ಆಗಬೇಕು ಎಂದರು.
PM Modi In Hubli , national youth day 2023