ಪ್ರಧಾನಿ ಮೋದಿಯಿಂದ ಎನ್‌ಡಿಎ ಸೇರಲು ಆಂಧ್ರ ಸಿಎಂ ಜಗನ್ ಗೆ ಆಹ್ವಾನ ? ( Pm Modi )
ಹೊಸದಿಲ್ಲಿ, ಅಕ್ಟೋಬರ್06: ಆಂಧ್ರ ಪ್ರದೇಶ ಸಿಎಂ ಜಗನ್ಮೋಹನ ರೆಡ್ಡಿ ಅವರ ರಾಷ್ಟ ರಾಜಧಾನಿ ದೆಹಲಿ ಪ್ರವಾಸವು ಸಾಕಷ್ಟು ರಾಜಕೀಯ ಮಹತ್ವವನ್ನು ಗಳಿಸಿದೆ.( Pm Modi )

ಮಂಗಳವಾರ ಬೆಳಿಗ್ಗೆ ಜಗನ್ ಪಿಎಂ ನರೇಂದ್ರ ಮೋದಿಯವರ ಅಧಿಕೃತ ನಿವಾಸವಾದ ರೇಸ್ ಕೋರ್ಸ್ ಗೆ ಭೇಟಿ ನೀಡಿದರು. ಸುಮಾರು 40 ನಿಮಿಷಗಳ ಕಾಲ ಪ್ರಧಾನಿ ಮೋದಿ ಮತ್ತು ಜಗನ್ ವಿವಿಧ ಅಂಶಗಳ ಕುರಿತು ಮಾತುಕತೆ ನಡೆಸಿದರು.
ಚೀನಾ ದುಸ್ಸಾಹಸಕ್ಕೆ ಸರಿಯಾದ ಉತ್ತರ ನೀಡುವ ಸಾಮರ್ಥ್ಯ ಭಾರತೀಯ ಸೇನೆಗಿದೆ –ಐಎಎಫ್ ಮುಖ್ಯಸ್ಥ
ಸಭೆಯ ನಂತರ, ನವದೆಹಲಿ ಮೂಲಗಳು ಪ್ರಧಾನಿ ಮೋದಿ ಜಗನ್ ಅವರನ್ನು ಎನ್‌ಡಿಎ ಸೇರಲು ಆಹ್ವಾನಿಸಿದ್ದಾರೆ ಎಂದು ವರದಿ ಮಾಡುತ್ತಿವೆ. ಅಲ್ಲದೆ ಪ್ರಧಾನಿ ಮೋದಿ ಎರಡು ಕೇಂದ್ರ ಕ್ಯಾಬಿನೆಟ್ ಸ್ಥಾನಗಳನ್ನು ಮತ್ತು ರಾಜ್ಯ ಸಚಿವರನ್ನು ವೈಸಿಪಿಗೆ ನೀಡುವ ಮೂಲಕ ಟಿಡಿಪಿಯನ್ನು ಚೆಕ್ಮೇಟ್ ಮಾಡಲು ಯೋಚಿಸುತ್ತಿದ್ದಾರೆ ಎಂದು ವರದಿ ಮಾಡಿವೆ.

ಆದರೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮೂಲಗಳು ಈ ವರದಿಗಳನ್ನು ನಿರಾಕರಿಸಿವೆ.
ಒಂದು ವೇಳೆ ಜಗನ್ ಅವರು ಎನ್‌ಡಿಎ ಸೇರಿದರೆ, ಜನಸೇನೆ ಮತ್ತು ಅದರ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಭವಿಷ್ಯವೇನು. ಪವನ್ ಬಿಜೆಪಿಯ ಭಾಗವಾಗುತ್ತಾರೆಯೇ ಅಥವಾ ಬಿಜೆಪಿ, ವೈಸಿಪಿ ಮತ್ತು ಜನಸೇನೆ ಮೈತ್ರಿ ಮಾಡಿಕೊಳ್ಳುವುದೇ? ಎಂಬ ಪ್ರಶ್ನೆ ಮೂಡಿದೆ.
ಆಸಿಡ್ ರಿಫ್ಲಕ್ಸ್ ಔಷಧಿಗಳ ನಿಯಮಿತ ಬಳಕೆಯಿಂದ ಮಧುಮೇಹದ ಅಪಾಯ ಹೆಚ್ಚು
ಆಂಧ್ರ ಪ್ರದೇಶದ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ ಜನರು ಅದರ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








