ಸಂಗೀತ ಮಾಂತ್ರಿಕ ಇಳಯರಾಜಗೆ ಪ್ರಧಾನಿಯಿಂದ ಗೌರವ ಡಾಕ್ಟರೆಟ್ ಪ್ರಧಾನ…
ಕರ್ನಾಟಕ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ತೆರಳಿದ್ದಾರೆ. ಪ್ರಧಾನಿಯವರನ್ನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬರಮಾಡಿಕೊಂಡರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಗಾಂಧಿಗ್ರಾಮದಲ್ಲಿ ರೋಡ್ ಶೋ ನಡೆಸಿದರು.
ದಿಂಡಿಗಲ್ನ ಗಾಂಧಿಗ್ರಾಮ್ ರೂರಲ್ ಇನ್ಸ್ಟಿಟ್ಯೂಟ್ನ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೊದಿ ಅವರು ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ರಾಜ್ಯಪಾಲ ಆರ್.ಎನ್.ರವಿ ಉಪಸ್ಥಿತರಿದ್ದರು.
#WATCH | Prime Minister Narendra Modi presents an honorary doctorate to music maestro Ilayaraja at the 36th Convocation Ceremony of Gandhigram Rural Institute, Dindigul.
Chief Minister MK Stalin, Governor RN Ravi, and others present at the ceremony. pic.twitter.com/WLtVYpuA4n
— ANI (@ANI) November 11, 2022
ನಂತರ ಮಾತನಾಡಿದ ಪ್ರಧಾನಿ ಮೋದಿ ಕೋರ್ಸ್ ಪೂರ್ಣಗೊಳಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅದನ್ನ ಸಾಧ್ಯವಾಗಿಸಲು ಪೋಷಕರ ತ್ಯಾಗವನ್ನ ಅಭಿನಂದಿಸಿದರು.
ಗಾಂಧಿಗ್ರಾಮವನ್ನು ಮಹಾತ್ಮ ಗಾಂಧೀಜಿಯವರೇ ಉದ್ಘಾಟಿಸಿದರು. ಅವರ ಗ್ರಾಮಾಭಿವೃದ್ಧಿಯ ಚಿಂತನೆಗಳ ಸ್ಪೂರ್ತಿಯನ್ನು ಇಲ್ಲಿ ಕಾಣಬಹುದು. ಗಾಂಧಿ ಮೌಲ್ಯಗಳು ಹೆಚ್ಚು ಪ್ರಸ್ತುತವಾಗುತ್ತಿವೆ. ಸಂಘರ್ಷವನ್ನು ಕೊನೆಗಾಣಿಸಲು ಅಥವಾ ಹವಾಮಾನ ಬಿಕ್ಕಟ್ಟನ್ನು ಕೊನೆಗೊಳಿಸಲು, ಮಹಾತ್ಮ ಗಾಂಧಿಯವರ ಚಿಂತನೆಗಳು ಇಂದಿನ ಅನೇಕ ಸವಾಲುಗಳಿಗೆ ಉತ್ತರಗಳನ್ನು ಹೊಂದಿವೆ ಎಂದು ತಿಳಿಸಿದರು.








