ಶ್ರೀ ಸೋಮನಾಥ ಮಂದಿರದ ಅಧ್ಯಕ್ಷತೆವಹಿಸಿದ ಪ್ರಧಾನಿ ಮೋದಿ – Saaksha Tv
ಗುಜರಾತ್ : ಪ್ರಧಾನಿ ಮೋದಿ ಅವರು ತಮ್ಮ ತವರು ರಾಜ್ಯದ ಪ್ರವಾಸದಲ್ಲಿದ್ದು, ಇಂದು ಶ್ರೀ ಸೋಮನಾಥ ಮಂದಿರಕ್ಕೆ ಭೇಟಿ ನೀಡಿ ದೇವಸ್ಥಾನ ಟ್ರಸ್ಟ್ ನ ಸಭೆಯ ಅಧ್ಯಕ್ಷರಾಗಿದ್ದಾರೆ.
ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸಭೆಯಲ್ಲಿ ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತಹ ಮೂಲಸೌಕರ್ಯ ಉನ್ನತೀಕರಣ ಕ್ರಮಗಳ ಕುರಿತು ನಾವು ಚರ್ಚಿಸಿದ್ದಾರೆ. ಸೋಮನಾಥವನ್ನು ಆದರ್ಶ ತೀರ್ಥ ಕ್ಷೇತ್ರವನ್ನಾಗಿ ಮಾಡಲು ಟ್ರಸ್ಟ್ ಅನೇಕ ಪ್ರಯತ್ನಗಳನ್ನು ಮಾಡಿದೆ. ಈಗ ಸೋಮನಾಥ ಕ್ಷೇತ್ರ ಎಲ್ಲೆಡೆಯಿಂದ ಜನರನ್ನು ಸೆಳೆಯುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
The members of the Trust shared their valuable inputs on how we can effectively cater to the needs of the future. It was great that Advani Ji participated in the meeting via video conferencing. Efforts of the Trust during COVID-19 and Cyclone Tauktae were also lauded.
— Narendra Modi (@narendramodi) March 11, 2022
ಭವಿಷ್ಯದ ಅಗತ್ಯಗಳನ್ನು ನಾವು ಹೇಗೆ ಪರಿಣಾಮಕಾರಿಯಾಗಿ ಪೂರೈಸಬಹುದು ಎಂಬುದರ ಕುರಿತು ಟ್ರಸ್ಟ್ ನ ಸದಸ್ಯರು ಯೋಚನೆಯನ್ನು ಹಂಚಿಕೊಂಡರು. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದು, ಅದ್ಭುತವಾಗಿತ್ತು. ಇದೇ ವೇಳೆ ಕೋವಿಡ್ ಮತ್ತು ತೌಕ್ತೆ ಚಂಡಮಾರುತದ ಸಮಯದಲ್ಲಿ ಟ್ರಸ್ಟ್ನ ಜನಪರ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.








