ಮೋದಿ ಜನ್ಮ ದಿನದಂದು ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ…
ಸೆಪ್ಟೆಂಬರ್ 17 ರ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಇದೇ ದಿನ ಜನ್ಮಿಸಿದ ಮಕ್ಕಳಿಗೆ ಚಿನ್ನದ ಉಂಗುರುವನ್ನ ಉಡುಗೊರೆಯಾಗಿ ನೀಡಲು ತಮಿಳುನಾಡು ಭಾರತೀಯ ಜನತಾ ಪಕ್ಷ ನಿರ್ಧಾರವನ್ನ ಮಾಡಿದೆ. ಇದಕ್ಕಾಗಿ ಚೆನೈ ನ RSRM ಆಸ್ಪತ್ರೆಯನ್ನ ಆಯ್ಕೆ ಮಾಡಲಾಗಿದೆ. ಈ ಪ್ರತಿ ಉಂಗುರವು 5000 ಮೌಲ್ಯದ 2 ಗ್ರಾಂ ತೂಕವನನ್ನ ಹೊಂದಿರಲಿದೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ದೆಹಲಿಯಲ್ಲಿ ಈ ಯೋಜನೆ ಕುರಿತು ಮಾತನಾಡಿದ್ದಾರೆ. ತಮಿಳುನಾಡು BJP ಚೆನ್ನೈನಲ್ಲಿ RSRM ಆಸ್ಪತ್ರೆಯನ್ನು ಗುರುತಿಸಿದ್ದು ಸೆಪ್ಟೆಂಬರ್ 17 ರಂದು ಆಸ್ಪತ್ರೆಯಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೆ 2 ಗ್ರಾಂ ಚಿನ್ನದ ಉಂಗುರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದಲ್ಲದೇ ಪ್ರಧಾನಿ ಮೋದಿ 72ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಎಂಕೆ ಸ್ಟಾಲಿನ್ ಅವರ ಕ್ಷೇತ್ರವಾಗಿರುವ ಕೊಳತ್ತೂರು ಕ್ಷೇತ್ರದಲ್ಲಿ 720 ಕೆಜಿ ಮೀನು ವಿತರಿಸಲಾಗುವುದು. ಮೀನು ವಿತರಣೆಯು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅಡಿಯಲ್ಲಿ ನಡೆಯಲಿದೆ. ಇದು ಮೀನುಗಳನ್ನು ಸೇವಿಸಲು ಜನರನ್ನು ಪ್ರೋತ್ಸಾಹಿಸುತ್ತದೆ.