ಜೂನ್ 21 ರಂದು ಮೈಸೂರಿಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಜೂನ್ 21 ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅರಮನೆ ನಗರಿ ಮೈಸೂರಿಗೆ ಬರುವುದು ಖಚಿತವಾಗಿದೆ.
ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷಾಂತರ ಯೋಗಪಟುಗಳ ಸಮ್ಮುಖದಲ್ಲಿ ಪ್ರಧಾನಿಗಳು ಯೋಗಾ ದಿನಾಚರಣೆಗೆ ಚಾಲನೆ ನೀಡಿ ಬಳಿಕ ತಾವು ಕೂಡ ಯೋಗ ಮಾಡಲಿದ್ದಾರೆ.
ಅಂತರಾಷ್ಟ್ರೀಯ ಯೋಗದಿನದಂದು 1,10,000 ಕ್ಕೂ ಅಧಿಕ ಮಂದಿ ಸಮೂಹಿಕವಾಗಿ ಯೋಗ ಮಾಡಲಿದ್ದಾರೆ. ಈ ಮೂಲಕ ಗಿನ್ನೀಸ್ ದಾಖಲೆಗೆ ಮೈಸೂರು ಸಜ್ಜಾಗುತ್ತಿದೆ. ಕಳೆದು ತಿಂಗಳು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಮೈಸೂರು ಸಂಸದರಾದ ಪ್ರತಾಪ್ ಸಿಂಹ ಮತ್ತು ಕುಟುಂಬ ದೆಹಲಿಗೆ ತೆರಳಿ ಮೋದಿಯವರನ್ನ ಮೈಸೂರಿಗೆ ಅಹ್ವಾನಿಸಿತ್ತು.
ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ.