ಧರ್ಮ, ಜಾತಿ ಮತ್ತು ಭಾಷೆ ಮೂಲಕ ದೇಶ ಒಡೆಯು ಶಕ್ತಿಯಿಂದ ದೂರ ಇರಬೇಕು – ಮೋದಿ…
ಧರ್ಮ, ಜಾತಿ ಮತ್ತು ಭಾಷೆ ಮೂಲಕ ದೇಶ ಒಡೆಯುವ ಋಣಾತ್ಮಕ ಶಕ್ತಿಗಳಿಂದ ದೂರ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಏಕತಾ ದಿವಸ್ ನಮ್ಮ ರಾಷ್ಟ್ರವನ್ನು ಒಗ್ಗೂಡಿಸುವಲ್ಲಿ ಸರ್ದಾರ್ ಪಟೇಲ್ ಅವರ ಅಮೂಲ್ಯ ಪಾತ್ರಕ್ಕೆ ಗೌರವವಾಗಿದೆ ಎಂದು ಹೇಳಿದರು. ಏಕತೆ ಯಾವಾಗಲೂ ಭಾರತದ ವಿಶಿಷ್ಟತೆಯಾಗಿದೆ ಆದರೆ ಇಂದಿಗೂ ದೇಶವನ್ನು ಒಡೆಯುವ ಮತ್ತು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ದೇಶವನ್ನು ಧರ್ಮ, ಜಾತಿ ಮತ್ತು ಭಾಷೆಯಿಂದ ವಿಭಜಿಸುವ ಋಣಾತ್ಮಕ ಅಂಶಗಳಿಂದ ದೂರವಿರಬೇಕು ಎಂದು ಅವರು ಜನರನ್ನು ಒತ್ತಾಯಿಸಿದರು.
ನಿನ್ನೆ ಮೊರ್ಬಿಯಲ್ಲಿ ಸೇತುವೆ ಕುಸಿತ ದುರಂತದಲ್ಲಿ ಜೀವಹಾನಿಗೆ ಮೋದಿ ಸಂತಾಪ ಸೂಚಿಸಿದರು. ರಾಜ್ಯ ಸರ್ಕಾರಕ್ಕೆ ಕೇಂದ್ರವು ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ಮೋದಿ ಹೇಳಿದರು. ಸಂತ್ರಸ್ತರ ಕುಟುಂಬಗಳಿಗೆ ಸರಕಾರ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದು ಭರವಸೆ ನೀಡಿದರು.
ಮೋರ್ಬಿ ಸೇತುವೆ ಕುಸಿತ ದುರಂತದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.
PM Narendra Modi urges people to refrain from negative narratives that try to divide country on lines of religion, caste & language