ವಾರಣಾಸಿಯಲ್ಲಿ 64,180 ಕೋಟಿಯ PMASBY ಯೋಜನೆ ಘೋಷಿಸಿದ ಮೋದಿ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ 64,180 ಕೋಟಿಯ PMASBY ( ಪ್ರಧಾನ ಮಂತ್ರಿ ಆತ್ಮನಿರರ್ಭರ್ ಸ್ವಸ್ಥ ಭಾರತ್ ಯೋಜನ್) ಗೆ ಚಾಲನೆ ನೀಡಿದರು.
ದೇಶದಲ್ಲಿ ಸೃಷ್ಟಿಯಾಗುವ ಆರೋಗ್ಯದ ಬಿಕ್ಕಟ್ಟುಗಳನ್ನ ಎದುರಿಸಲು ಭಾರತವು ಸಂಪೂರ್ಣವಾಗಿ ಸ್ವಾವಲಂಬಿಯಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರೋಗ್ಯ ಮತ್ತು ಮೂಲ ಸೌಕರ್ಯಗಳನ್ನ ಹೆಚ್ಚಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಜೊತೆಯಲ್ಲಿ ವೈದ್ಯಕೀಯ ಕ್ಷೇತ್ರದ ಸಂಶೋಧನೆಗಳನ್ನ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕಳೆದ ಒಂದು ವಾರದ ಅವಧಿಯಲ್ಲಿ ಮೋದಿ ಎರಡು ಭಾರಿ ಉತ್ತರ ಪ್ರದೇಶಕ್ಕೆ ಬೇಟಿ ನೀಡುತ್ತಿದ್ದಾರೆ. ಸ್ವ ಕ್ಷೇತ್ರ ವಾರಣಾಸಿ ಹಲವು ಯೋಜನೆಗಳನ್ನ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ.. 5000 ಸಾವಿರ ಕೋಟಿ ರೂ ಮೌಲ್ಯದ 9 ಕಾಲೇಜುಗಳು ಮತ್ತು ಮುವತ್ತು ಯೋಜನೆಗಳನ್ನ ಜಾರಿಗೊಳಿಸಲಾಗುತ್ತಿದೆ. ಈ ಸಮಯದಲ್ಲಿ ಯೋಗಿ ಆದಿತ್ಯನಾಥ್ ಅವರು ಸಾಥ್ ನೀಡಲಿದ್ದಾರೆ…
ಉತ್ತರ ಪ್ರದೇಶದ ವಿಧಾನಸಭಾ ಎಲೆಕ್ಷನ್ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೇಸ್ ಮತ್ತು ಜಿಜೆಪಿಯ ನಾಯಕರು ಭರ್ಜರಿ ಅಶ್ವಾಸನೆಗಳನ್ನ ನೀಡುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ 10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.