Poco C55 – ಬಡ್ಜೆಟ್ ಬೆಲೆಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ, 5,000mAh ಬ್ಯಾಟರಿ ಒಳಗೊಂಡ ಮೊಬೈಲ್ ಬಿಡುಗಡೆ…
ಚೀನಾದ ಸ್ಮಾರ್ಟ್ ಪೋನ್ ತಯಾರಿಕಾ ಕಂಪನಿ Poco C55 ಎಂಬ ಬಡ್ಜೆಟ್ ಬೆಲೆಯ ಫೋನ್ ಅನ್ನ ಭಾರತದಲ್ಲಿ ಲಾಂಚ್ ಮಾಡಿದೆ. Poco C55 ಮೊಬೈಲ್ ಅನ್ನ MediaTek Helio G85 ಪ್ರೊಸೆಸರ್ ಮತ್ತು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಪರಿಚಯಿಸಲಾಗಿದೆ. ದೊಡ್ಡದಾದ HD ಪ್ಲಸ್ ಡಿಸ್ಪ್ಲೇ ಮತ್ತು 10W ವೇಗದ ಚಾರ್ಜಿಂಗ್ ಸಪೋರ್ಟ್ ನೊಂದಿಗೆ 5,000mAh ಬ್ಯಾಟರಿಯನ್ನ ನೀಡಲಾಗಿದೆ.
Poco C55 ಬೆಲೆ
Poco C55 64 GB ಸ್ಟೋರೇಜ್ 4 GB RAM ಮೊಬೈಲ್ ಬೆಲೆಯನ್ನ 9,499 ರೂ. ಗೆ ನಿಗದಿಪಡಿಸಲಾಗಿದೆ. . 6 GB RAM ಜೊತೆಗೆ 128 GB ಸ್ಟೋರೇಜ್ ಬೆಲೆ 10,999 ರೂ ನಿಗದಿ ಪಡಿಸಲಾಗಿದೆ. ಕೂಲ್ ಬ್ಲೂ, ಫಾರೆಸ್ಟ್ ಗ್ರೀನ್ ಮತ್ತು ಪವರ್ ಬ್ಲ್ಯಾಕ್ ಬಣ್ಣಗಳಲ್ಲಿ ಮೊಬೈಲ್ ಲಭ್ಯವಿದೆ. ಫೆ 28 ರಿಂದ ಮಾರಾಟಕ್ಕೆ ಲಭ್ಯವಿದೆ.
Poco C55 ಫೀಚರ್ಸ್
ಮೀಡಿಯಾ ಟೆಕ್ ಹೆಲಿಯೊ ಜಿ85 ಪ್ರೊಸೆಸರ್ ನೀಡಲಾಗಿದೆ. 6.71-ಇಂಚಿನ HD + ಡಿಸ್ಪ್ಲೇಯನ್ನ 60Hz ರಿಫ್ರೆಶ್ ರೇಟ್ ನೊಂದಿಗೆ ನೀಡಲಾಗಿದೆ.
ಕ್ಯಾಮೆರಾಗೆ ಸಂಬಂಧಿಸಿದಂತೆ, ಹಿಂಬದಿಯಲ್ಲಿ ಎರಡು ಕ್ಯಾಮೆರಾ ನೀಡಲಾಗಿದೆ ಪ್ರಾಥಮಿಕ ಲೆನ್ಸ್ 50 ಮೆಗಾ ಫಿಕ್ಸೆಲ್ ನ್ನ ಹೊಂದಿದೆ. ಮಂಬಾಗದಲ್ಲಿ ಸೆಲ್ಫಿಗಾಗಿ 5 ಮೆಗಾ ಫಿಕ್ಸೆಲ್ ನೀಡಲಾಗಿದೆ. ಇದಲ್ಲದೆ ಫಿಂಗರ್ ಪ್ರಿಂಟ್ ಸೆನ್ಸಾರ್ ಸಹ ನೀಡಲಾಗಿದೆ.
Poco C55 Launched In India With MediaTek Helio G85 SoC