ವಿಮೆ ಪಾಲಿಸಿದಾರರ ಅನುಕೂಲಕ್ಕಾಗಿ ಸರ್ಕಾರದಿಂದ ಮಹತ್ವದ ಕ್ರಮ
ನವದೆಹಲಿ: ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ವಿಮೆ ಕಂಪನಿಗಳಿಗೆ ಪಾಲಿಸಿ ಕುರಿತಾದ ಮಹತ್ವದ ಸೂಚನೆಯನ್ನ ನೀಡಿದೆ. ಅದೇನೆಂದ್ರೆ ವಿಮೆ ಪಾಲಿಸಿದಾರರಿಗೆ ಪಾಲಿಸಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನೀಡುವಂತೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.
ವಿಮೆ ಕಂಪನಿಗಳು ಡಿಜಿ ಲಾಕರ್ ಬಳಕೆಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಬೇಕು. ದಾಖಲೆಗಳನ್ನು ಡಿಜಿ ಲಾಕರ್ ನಲ್ಲಿ ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಪಾಲಿಸಿದಾರರಿಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಸೂಚನೆ ನೀಡಿದ್ದು, ಡಿಜಿಟಲ್ ರೂಪದಲ್ಲಿ ನೀಡಬೇಕು. ಇದರಿಂದಾಗಿ ವಿಮೆ ಕ್ಲೇಮ್ ಪ್ರಕ್ರಿಯೆಗಳಿಗೆ ಅನುಕೂಲವಾಗುತ್ತದೆ. ವೆಚ್ಚ ಕೂಡ ಕಡಿಮೆಯಾಗಲಿದ್ದು, ಗ್ರಾಹಕರಿಗೆ ದಾಖಲೆ ಸಿಕ್ಕಿಲ್ಲ ಎನ್ನುವ ದೂರು, ವ್ಯಾಜ್ಯ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.