ರಾಜ್ ಕುಂದ್ರಾ ಬಗ್ಗೆ ಮಾದಕ ನಟಿ ಪೂನಂ ಪಾಂಡೆ  ಬಿಚ್ಚಿಟ್ಟ ಶಾಕಿಂಗ್ ವಿಚಾರಗಳು..!

1 min read

ರಾಜ್ ಕುಂದ್ರಾ ಬಗ್ಗೆ ಮಾದಕ ನಟಿ ಪೂನಂ ಪಾಂಡೆ  ಬಿಚ್ಚಿಟ್ಟ ಶಾಕಿಂಗ್ ವಿಚಾರಗಳು..!

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ  ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ವಿಚಾರಣೆ ನಡೆಸಿರುವ ನ್ಯಾಯಾಲುಯವು ಜುಲೈ 23 ರವರೆಗೂ ಅವರನ್ನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.. ಈ ನಡುವೆ ರಾಜ್ ಕುಂದ್ರ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತ ಇದ್ದಾರೆ.. ರಾಜ್ ಕುಂದ್ರ ಪೋರ್ನ್ ವಿಡಿಯೋಗಳ ಕುರಿತಾಗಿ ಮಾಡಿದ್ದ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಕೆಲವೊಬ್ರು ರಾಜ್ ಕುಂದ್ರಾ ಪರ ನಿಂತಿದ್ದಾರೆ..

ಇದರ ಬೆನ್ನಲ್ಲೇ ಕಾಂಟ್ರವರ್ಸಿ ಕ್ವೀನ್ , ಬೋಲ್ಡ್ ಹೇಳಿಕೆಗಳನ್ನೇ ನೀಡುತ್ತಾ ಸುದ್ದಿಯಲ್ಲಿರುವ ಮಾದಕ ನಟಿ ಪೂನಂ ಪಾಂಡೆ  ಈ ಹಿಂದೆ ರಾಜ್ ಕದ್ರಾ ವಿರುದ್ಧ ಮಾಡಿದ್ದ ಆರೋಪದ ಸುದ್ದಿ ಈಗ ವೈರಲ್ ಆಗ್ತಿದೆ.. ಹೌದು ಪೂನಂ  2019ರಲ್ಲಿಯೇ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದರು.  ರಾಜ್ ಕುಂದ್ರರನ್ನು ‘ಬ್ಲೂ ಫಿಲ್ಮ್ ದಂಧೆಯ ಮಾಸ್ಟರ್ ಮೈಂಡ್’ ಎಂದು ಆರೋಪಿಸಿದ್ದರು ಎನ್ನುವ ಸುದ್ದಿ ಈಗ  ಬಿ ಟೌನ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.. ರಾಜ್ ಕುಂದ್ರ ಬಂಧನದ ಬೆನ್ನಲ್ಲೇ ಪೂನಂ ಪಾಂಡೆ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ. ಮಾಡೆಲ್, ನಟಿ ಪೂನಂ ಪಾಂಡೆ 2019ರಲ್ಲಿ ರಾಜ್ ಕುಂದ್ರ ವಿರುದ್ಧ ಮಾಡಿರುವ ಗಂಭೀರ ಆರೋಪ ಈಗ ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಪೂನಂ ಪಾಂಡೆ ನೀಡುತ್ತಿರುವ ಹೇಳಿಕೆಗಳು ಸಂಚಲನ ಸೃಷ್ಟಿಸುತ್ತಿವೆ. ಕುಂದ್ರಾ ವಿರುದ್ಧ ಪೂನಂ ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದು, ಶಾಕಿಂಗ್ ವಿಚಾರಗಳನ್ನ ಬಹಿರಂಗಪಡಿಸುತ್ತಿದ್ದಾರೆ.

ರಾಷ್ಟ್ರೀಯ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಪೂನಂ ‘ನನ್ನನ್ನು ಬೆದರಿಸಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದರು. ಅವರು ಹೇಳಿದಂತೆ ಚಿತ್ರೀಕರಣ ಮಾಡಬೇಕಿತ್ತು. ಫೋಸ್ ಕೊಡಬೇಕಿತ್ತು. ಇಲ್ಲವಾದಲ್ಲಿ ನನ್ನ ಖಾಸಗಿ ಸಂಗತಿಗಳನ್ನು ಸೋರಿಕೆ ಮಾಡುವುದಾಗಿ ಹೇಳುತ್ತಿದ್ದರು’ಎಂಬ ವಿಚಾರ ಹೊರಹಾಕಿದ್ದಾರೆ.  ನಾನು ಅವರ ಒಪ್ಪಂದಿಂದ ಹಿಂದಕ್ಕೆ ಸರಿದಾಗ ನನ್ನ ಖಾಸಗಿ ಸಂದೇಶಗಳನ್ನು ಲೀಕ್ ಮಾಡಿದರು.  ಕಾಲ್ ಮಾಡಿ, ನಿಮಗಾಗಿ ನಾನು ನಗ್ನವಾಗಲು ಸಿದ್ದ  ಅಂತಹ ಸಂಭಾಷೆಗಳೊಂದಿಗೆ ವೈಯಕ್ತಿಕ ನಂಬರ್ ಸೋರಿಕೆ ಮಾಡಿದರು  ಎಂದು ದೂರಿದ್ದಾರೆ. ಇದಾದ ಮೇಲೆ ನನಗೆ ಎಲ್ಲಾ ಕಡೆಯಿಂದಲೂ ಫೋನ್ ಕಾಲ್ ಬರುವುದಕ್ಕೆ ಶುರುವಾಯಿತು. ಸಾವಿರಾರು ಸಂಖ್ಯೆಯಲ್ಲಿ ಫೋನ್ ಕಾಲ್ ಬಂತು. ಜನರು ನನಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಲು ಶುರು ಮಾಡಿದರು. ಅಸಭ್ಯವಾಗಿ ವರ್ತಿಸಿದರು. ಆ ಸಮಯದಲ್ಲಿ ನನಗೆ ಏನಾದರೂ ತೊಂದರೆ ಉಂಟಾಗಬಹುದು ಎಂಬ ಭಯದಿಂದ ಮನೆ ಬಿಟ್ಟು ಹೋದೆ ಎಂದು ಪೂನಂ ಬಹಿರಂಗಪಡಿಸಿದ್ದಾರೆ.

ರಾಜ್ ಕುಂದ್ರಾ ಅವರ ಅರ್ಮ್ಸ್ ಪ್ರೈಮ್ ಮೀಡಿಯಾ ಸಂಸ್ಥೆ ಜೊತೆ ಪೂನಂ ಪಾಂಡೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದ ಮುಗಿದ ಬಳಿಕವೂ ರಾಜ್ ಕುಂದ್ರ ಮತ್ತು ಅವರ ಸಹಚರರು ತನ್ನ ವಿಡಿಯೋ ತುಣುಕುಗಳನ್ನು ಮತ್ತು ಸಿನಿಮಾಗಳನ್ನು ನಿರ್ದಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪೂನಂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಆಗ ರಾಜ್ ಕುಂದ್ರಾ ಈ ಆರೋಪಗಳನ್ನು ನಿರಾಕರಿಸಿದರು. ಇದೀಗ ರಾಜ್ ಕುಂದ್ರಾ ಅರೆಸ್ಟ್ ಬೆನ್ನಲ್ಲೇ ಅವರ ಹಲೇ ಟ್ವೀಟ್ ಗಳು , ಪೂನಂ ಆರೋಪ ಸುದ್ದಿಗಳೂ ಕೂಡ ವೈರಲ್ ಆಗತೊಡಗಿವೆ..

ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ರಾಜ್‌ ಕುಂದ್ರಾ ಅವರು ತಮಗೆ ನೇರ ಸಂದೇಶ ಕಳುಹಿಸಿದ್ದರು ಎಂದು ಯೂಟ್ಯೂಬ್‌ ಸ್ಟಾರ್‌ ಪುನೀತ್‌ ಕೌರ್‌ ಆರೋಪಿಸಿದ್ದಾರೆ. ಇಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ರಾಜ್‌ ಕುಂದ್ರಾ ಅವರು ತಮಗೆ ನೇರ ಸಂದೇಶ ಕಳುಹಿಸಿದ್ದರು ಎಂದು ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ  ವಿಡಿಯೊಗಳ  ಮೂಲಕ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಬರೆದುಕೊಂಡಿರುವ ಕೌರ್‌, ಬ್ರೋಸ್‌, ನೇರ ಸಂದೇಶ ಹೊಂದಿದ್ದ ವಿಡಿಯೊ ಪರಿಶೀಲನೆ ಮಾಡಿದ್ದನ್ನು ನೀವು ನೆನಪಿಸಿಕೊಳ್ಳುತ್ತಿದ್ದಾರಾ? ಅಲ್ಲಿ ರಾಜ್‌ ಕುಂದ್ರಾ ಹಾಟ್‌ ಶಾಟ್‌ ಗಾಗಿ ನನ್ನನ್ನು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೇ ರಾಜ್‌ ಕುಂದ್ರಾ ನೇರ ಸಂದೇಶ ಕಳುಹಿಸಿದ್ದರು.. ನಾವು ಅದು ಸ್ಪಾಮ್ ಅಂದುಕೊಂಡಿದ್ದೆವು. ಈ ಮನುಷ್ಯ ನಿಜವಾಗಿಯೂ ಜನರಿಗೆ ಆಮಿಷವೊಡ್ಡುತ್ತಿದ್ದಾನೆ. ಈಗ ಅವನು ಜೈಲಿನಲ್ಲಿ ಕೊಳೆಯಲಿ ಎಂದು ಹೇಳಿದ್ದಾರೆ.

“ ರಾಜ್‌ ಕುಂದ್ರಾ ನನಗೆ ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಕೇಳಿದ್ದರು, ಈತ ಜೈಲಿನಲ್ಲಿಯೇ ಕೊಳೆಯಲಿ ” – ಯೂಟ್ಯೂಬ್ ಸ್ಟಾರ್

ಈ ನಡುವೆ  ರಾಜ್ ಕುಂದ್ರಾ ಅವರು ಈ ಹಿಂದೆ ಮಾಡಿದ್ದ  ಟ್ವೀಟ್ ಈಗ ಭಾರೀ ವೈರಲ್ ಆಗ್ತಿದೆ. ನೀಲಿ ಚಿತ್ರದ ಬಗ್ಗೆ ರಾಜ್ ಕುಂದ್ರಾ ಅವರು 2012ರಲ್ಲಿ ಮಾಡಿದ್ದ ಸುಮಾರು 8 – 9 ವರ್ಷಗಳ ಹಳೆಯ ಟ್ವೀಟ್‌ ಗಳು ಈಗ ವೈರಲ್ ಆಗುತ್ತಿವೆ. ವೇಶ್ಯಾವಾಟಿಕೆ ಮತ್ತು ಟ್ವೀಟ್ ನಲ್ಲಿ ‘ಕ್ಯಾಮೆರಾದಲ್ಲಿ ಸೆರೆಯಾದ ಸೆಕ್ಸ್‌ ನೋಡಲು ಹಣ ತೆರುವುದು ಕಾನೂನುಬದ್ಧ ಆಗಿರುವಾಗ ವೇಶ್ಯಾವಾಟಿಕೆ ಏಕೆ ಕಾನೂನು ಬಾಹಿರ’ ಎಂದು ರಾಜ್ ಕುಂದ್ರಾ ಪ್ರಶ್ನೆ ಮಾಡಿದ್ದರು. ಆ ಮೂಲಕ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅದೇ ವರ್ಷ ಮಾಡಿದ್ದ ಮತ್ತೊಂದು ಟ್ವೀಟ್ ನಲ್ಲಿ ನಟರು ಕ್ರಿಕೆಟ್ ಆಡುತ್ತಿದ್ದಾರೆ. ಕ್ರಿಕೆಟಿಗರು ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣಿಗಳು ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ. ಪೋರ್ನ್ ಸ್ಟಾರ್‌ ಗಳು ನಟರಾಗುತ್ತಿದ್ದಾರೆ ಎಂದಿದ್ದರು. ಇದೀಗ ರಾಜ್  ಬಂಧನದ ಬೆನ್ನಲ್ಲೇ ಹಳೆಯ ಟ್ವೀಟ್ ಗಳು ವೈರಲ್ ಆಗ್ತಿವೆ.. ಇನ್ನೂ ಈ ಪ್ರಕರಣದ ಬಗ್ಗೆ ಹಲವು ತಿಂಗಳುಗಳಿಂದ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು.. ಮಾಹಿತಿಗಳನ್ನೆಲ್ಲಾ ಕಲೆ ಹಾಕಿದ ನಂತರ ಈ ಪ್ರಕರಣದ ಮುಖ್ಯ ಆರೋಪಿ ರಾಜ್  ಕುಂದ್ರಾ ಎಂಬುದು ಗೊತ್ತಾಗಿದೆ..raj kundra saaskahtv

ವರ್ಷದ ಫೆಬ್ರವರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು, ತನಿಖೆ ವೇಳೆ ಪ್ರಕರಣದ ಮುಖ್ಯ ಆರೋಪಿ ರಾಜ್ ಕುಂದ್ರಾ ಎಂದು ತಿಳಿದುಬಂದಿದ್ದು ಅವರ ವಿರುದ್ಧ ಪ್ರಾಥಮಿಕ ಸಾಕ್ಷ್ಯಗಳನ್ನು ಒಟ್ಟುಗೂಡಿಸಿಕೊಂಡ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಉದ್ಯಮಿ ಆಗಿದ್ದು, ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್‌ನ ಮಾಲೀಕರು ಸಹ ಆಗಿದ್ದಾರೆ.  ಈ ನಡುವೆ ಮಾಡೆಲ್ ಒಬ್ಬರು ರಾಜ್ ಕುಂದ್ರಾ ಬೆಂಬಲಕ್ಕೆ ಬಂದಿದ್ದು, ರಾಜ್ ಕುಂದ್ರ ತಪ್ಪು ಮಾಡಿಲ್ಲ.. ಪಾರ್ನ್ ವಿಡಿಯೋಸ್ ಶುಟ್ ಮಾಡಿಸಿಲ್ಲ. ಇವು ಬೋಲ್ಡ್ ವಿಡಿಯೋಸ್. ಎರಿಯೋಟಿಕ್ ವಿಡಿಯೋಗಳನ್ನ ಪಾರ್ನ್ ವಿಡಿಯೋಗಳ ಜೊತೆಗೆ ಸೇರಿಸಬೇಡಿ ಎಂದಿದ್ದಾರೆ. ಕಳೆದ ವರ್ಷದಿಂದ ಅಶ್ಲೀಲ ಚಿತ್ರೀಕರಣ ದಂಧೆಯ ಹಿಂದೆ ಬಿದ್ದಿದ್ದ ಪೊಲೀಸರು ದೊಡ್ಡ ಜಾಲವನ್ನು ಪತ್ತೆ ಮಾಡಿ 9 ಜನರನ್ನು ಬಂಧಿಸಿದ್ದಾರೆ. ಅಲ್ಲದೇ ಇನ್ನೂ ಅನೇಕರ ಹೆಸರುಗಳು ಕೇಳಿ ಬರ್ತಿವೆ ಎನ್ನಲಾಗಿದೆ..

ಅಶ್ಲೀಲ ವಿಡಿಯೋ ಚಿತ್ರೀಕರಣ – ಶಿಕ್ಷೆ ತಪ್ಪಿಸಿಕೊಳ್ಳಲು ಪೊಲೀಸರಿಗೆ  ಲಂಚ ಕೊಟ್ರಾ ರಾಜ್ ಕುಂದ್ರಾ..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd