ಹಲವು ದಿನಗಳಿಂದ ಕಳಪೆ ಕೃಷಿ ಕೀಟನಾಶಕ ವಿರುದ್ಧ ಹೋರಾಟ ಮಾಡುತ್ತಿರುವ ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಮಾರಾಟಗಾರರು ಇಲ್ಲವೆ ಕೀಟನಾಶಕ ಕಂಪನಿಗಳು ಕಳಪೆ ಗುಣಮಟ್ಟದ ಕೃಷಿ-ರಾಸಾಯನಿಕಗಳ ಮಾರಾಟ ಮಾಡಿದ್ದು ಕಂಡು ಬಂದರೆ ಜೈಲು ಗ್ಯಾರಂಟಿ ಎಂಬ ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ. ನಷ್ಟ ಉಂಟಾದರೆ ರೈತರಿಗೆ ಪರಿಹಾರ ನೀಡುವ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ. ಇದಲ್ಲದೆ ಕೀಟನಾಶಕ ಜಾಹೀರಾತುಗಳ ಮೇಲೆ ಕಣ್ಣಿಟ್ಟಿರುವ ಇಲಾಖೆ, ರೈತರ ದಿಕ್ಕು ತಪ್ಪಿಸಿ ಔಷಧಿ ಮಾರಾಟ ಮಾಡಿದ್ರೂ ಸಹ ಕಾನೂನಿನ ಏಟು ಬೀಳೋದು ಗ್ಯಾರಂಟಿ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಜಾವಡೇಕರ್, ರೈತರ ಕೃಷಿಯ ಹಿತಾಸಕ್ತಿ ಕಾಪಾಡುವ ಸಲುವಾಗಿ ಈ ಮಸೂದೆ ಜಾರಿಗೆ ತರುತ್ತಿದ್ದು, ಷರತ್ತು, ನಿಯಮಗಳನ್ನು ಉಲ್ಲಂಘಿಸಿದರೆ ಕನಿಷ್ಠ 25 ಸಾವಿರದಿಂದ ಗರಿಷ್ಠ 50 ಲಕ್ಷ ರೂಪಾಯಿ ತನಕ ದಂಡವನ್ನೂ ಮತ್ತು ಗರಿಷ್ಠ 5 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸುವ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.
ರಾಷ್ಟ್ರೀಯ ತ್ರೋಬಾಲ್ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭರ್ಜರಿ ಸಾಧನೆ
ಮೂರು ವಿಭಾಗಗಳಲ್ಲೂ ಚಿನ್ನದ ಪದಕ – ಕರ್ನಾಟಕಕ್ಕೆ ಹೆಮ್ಮೆಯ ಗೆಲುವು ಗುಂಟೂರು: ಆಂಧ್ರಪ್ರದೇಶದ ಗುಂಟೂರಿನ ಆಂಧ್ರ ಪ್ರದೇಶ್ STEM ಸ್ಕೂಲ್ನಲ್ಲಿ ಸೆಪ್ಟೆಂಬರ್ 11 ಮತ್ತು 12ರಂದು ನಡೆದ...








