Pope Francis : ಉಸಿರಾಟದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಪೋಪ್ ಪ್ರಾನ್ಸಿಸ್…
86 ವರ್ಷದ ಪೋಪ್ ಫ್ರಾನ್ಸಿಸ್ ಅವರನ್ನು ಉಸಿರಾಟದ ಸೋಂಕಿನಿಂದ ಬುಧವಾರ ರೋಮ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯೇ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಕೆಲವು ಉಸಿರಾಟದ ತೊಂದರೆಗಳನ್ನ ಅನುಭವಿಸುತ್ತಿದ್ದಾರೆ.
ವೈದ್ಯಕೀಯ ತಪಾಸಣೆಗಾಗಿ ರೋಮ್ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದಿನ ಮಧ್ಯಾಹ್ನ, ವ್ಯಾಟಿಕನ್ ಫ್ರಾನ್ಸಿಸ್ ಅವರನ್ನು “ಕೆಲವು ಹಿಂದೆ ನಿಗದಿತ ತಪಾಸಣೆಗಾಗಿ” ದಾಖಲಿಸಲಾಗಿದೆ ಎಂದು ತಿಳಿದುಬಂದಿತ್ತು.
ಈ ತಿಂಗಳು ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥರಾಗಿ ಪೋಪ್ ಪ್ರಾನ್ಸಿಸ್ 10 ವರ್ಷಗಳನ್ನ ಪೂರೈಸಿದ್ದಾರೆ. “ಪೋಪ್ ಫ್ರಾನ್ಸಿಸ್ ಭಕ್ತರ ಪ್ರಾರ್ಥನೆಗಳಿಗೆರ ಕೃತಜ್ಞತೆ ತಿಳಿಸಿದ್ದಾರೆ ಎಂದು ಬ್ರೂನಿ ಹೇಳಿದ್ದಾರೆ.
ಗುರುವಾರ ಬೆಳಿಗ್ಗೆ ಪೋಪ್ ಅವರ ಕಾರ್ಯಕ್ರಮಗಳನ್ನ ರದ್ದುಗೊಳಿಸಲಾಗಿದೆ ಎಂದು ವ್ಯಾಟಿಕನ್ ಮೂಲವೊಂದು ತಿಳಿಸಿದ್ದಾರೆ. ಅರ್ಜೆಂಟೀನಾ ಮೂಲದ ಪೋಪ್ ದೀರ್ಘಕಾಲದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ ಮತ್ತು ಇತ್ತೀಚೆನಾ ದಿನಗಳಲ್ಲಿ ಗಾಲಿ ಕುರ್ಚಿಯನ್ನ ಅವಲಂಬಿಸಿದ್ದಾರೆ.
Pope Francis: Pope Francis admitted to hospital due to respiratory infection…