ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟದ ‘ಜನಸ್ಪಂದನ’ (Janaspandana) ಕಾರ್ಯಕ್ರಮ ಯಶಸ್ಸು ಕಂಡಿದೆ.
ಈ ಜನಸ್ಪಂದನ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದು, 11 ಸಾವಿರ ಅರ್ಜಿಗಳು ಸ್ವೀಕಾರವಾಗಿವೆ. ಒಂದೇ ತಿಂಗಳಲ್ಲಿ ಜನರಿಗೆ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳಿಗೆ ಖಡಕ್ ವಾರ್ನಿಂಗ ಮಾಡಿದ್ದಾರೆ. ಅಲ್ಲದೇ, ಸೆಂ 150ಕ್ಕೂ ಅಧಿಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು. 11 ಸಾವಿರ ಅರ್ಜಿಗಳು ಸಮಸ್ಯೆ ಪರಿಹಾರಕ್ಕೆ ಸಲ್ಲಿಕೆಯಾದವು.
ಮಗನಿಗೆ ಕೆಲಸ. ಮನೆ ಮಾಲೀಕನ ಕಿರುಕುಳ, ಗೃಹಲಕ್ಷ್ಮಿ ಹಣ ಬಂದಿಲ್ಲ. ಯೋಧನಿಂದ ತ್ರಿಚಕ್ರ ವಾಹನಕ್ಕೆ ಬೇಡಿಕೆ, ಜಮೀನಿನ ಮೇಲೆ ಬೇರೆಯವರಿಗೆ ಅಧಿಕಾರಿಗಳಿಂದ ದಾಖಲೆ ಮಾಡಿಕೊಟ್ಟಿದ್ದು ಸೇರಿದಂತೆ ಹಲವಾರು ಸಮಸ್ಯೆಗಳು ಸಿಎಂ ಬಳಿ ಬಂದವು. ಕಂದಾಯ ಇಲಾಖೆ, ವಸತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ದೂರುಗಳೇ ಜನಸ್ಪಂದನದಲ್ಲಿ ಹೆಚ್ಚಾಗಿ ಕಂಡು ಬಂದವು. ಪ್ರತಿ ಕೌಂಟರ್ ಗೆ ಸಿಎಂ ತೆರಳಿ ಅರ್ಜಿ ಸ್ವೀಕರಿಸಿದರು. ಸ್ಥಳದಲ್ಲಿ ಪರಿಹಾರ ಆಗುವ ಸಮಸ್ಯೆಗೆ ಪರಿಹಾರ ಘೋಷಿಸಿದರು.